ಬೆಂಗಳೂರು: ಸ್ಯಾಂಡಲ್‍ವುಡ್ ನಟ ವಿಜಯ್ ರಾಘವೇಂದ್ರರವರಿಗೆ ಇಂದು 42 ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ವಿಜಯ್ ರಾಘವೇಂದ್ರರವರಿಗೆ ಪ್ರೀತಿಯ ತಮ್ಮ ಶ್ರೀ ಮುರಳಿ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ತಿಳಿಸಿದ್ದಾರೆ.
ರಾಜ್ಯಾದ್ಯಂತ ಕೊರೊನಾದಿಂದ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆ ವಿಜಯ ರಾಘವೇಂದ್ರರವರು ತಮ್ಮ ಜನ್ಮದಿನವನ್ನು ಮನೆಯಲ್ಲಿಯೇ ಕುಟುಂಬದೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರರವರ ಪ್ರೀತಿಯ ತಮ್ಮ ಶ್ರೀಮುರುಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಣ್ಣನ ಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಹುಟ್ಟುಹಬ್ಬದ ಶುಭಾಶಯಗಳು ಅಣ್ಣ. ಖುಷಿ ಹಾಗೂ ಯಶಸ್ಸು ಸದಾ ಇರಲಿ ಎಂದು ವಿಶ್ ಮಾಡಿದ್ದಾರೆ.
Annaaa Happiest Birthday to you. Wishing you happiness and success always. @mutthuvijay pic.twitter.com/HCgCoyNy3v
— SRIIMURALI (@SRIMURALIII) May 26, 2021
ನಟ ಲವ್ಲಿ ಸ್ಟಾರ್ ಪ್ರೇಮ್, ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ವಿಜಯ್ ರಾಘವೇಂದ್ರ ಅವರಿಗೆ ಶುಭಾಶಯ ತಿಳಿಸಿದ್ದಾರೆ.
Happy Birthday Raganna. God bless you abundantly.
Stay Blessed & #STAYLOVELY pic.twitter.com/p6xld1R8If
— Prem Nenapirali (@StylishstarPrem) May 26, 2021
ವರ ನಟ ಡಾ. ರಾಜ್ ಕುಮಾರ್ ಅಭಿನಯದ ಚಲಿಸುವ ಮೋಡಗಳು ಸಿನಿಮಾದ ಮೂಲಕ ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ ವಿಜಯ್ ರಾಘವೇಂದ್ರ ಇದೀಗ ಚಂದನವದಲ್ಲಿ ನಾಯಕನಟರಾಗಿ ಮಿಂಚುತ್ತಿದ್ದಾರೆ. ಬಾಲ್ಯದಲ್ಲಿಯೇ ಚಿನ್ನಾರಿ ಮುತ್ತ ಸಿನಿಮಾಕ್ಕಾಗಿ ಅತ್ಯುತ್ತಮ ಬಾಲ ನಟ ರಾಜ್ಯ ಪ್ರಶಸ್ತಿ ಹಾಗೂ ಕೊಟ್ರೇಶಿ ಕನಸು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 1998ರಲ್ಲಿ ನಿನಗಾಗಿ ಸಿನಿಮಾದಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದ ಇವರು ಈವರೆಗೂ ಸುಮಾರು 49 ಸಿನಿಗಳಲ್ಲಿ ಅಭಿನಯಿಸಿದ್ದು, ಇದೀಗ ತಮ್ಮ 50ನೇ ಸಿನಿಮಾ ಸೀತಾರಾಮ್ ಬಿನೋಯ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.