ಬೆಂಗಳೂರು: ಅಂಧರ ಬಾಳಿಗೆ ಆಟೋ ಚಾಲಕರ (Auto Drivers) ಸೇನೆ ಹೊಸ ಬೆಳಕು ನೀಡಿದೆ. ಪ್ರೀತಿಸಿ ಆರ್ಥಿಕ ಸಮಸ್ಯೆಯಿಂದ ಮದುವೆಯಾಗದೇ ಇದ್ದ ಅಂಧ ಪ್ರೇಮಿಗಳಿಗೆ (Blind Couple) ಆಟೋ ಚಾಲಕರೆಲ್ಲಾ ಸೇರಿ ಅಪರೂಪದ ಮದುವೆ (Marriage) ಮಾಡಿಸಿದ್ದಾರೆ. ಆಟೋ ಚಾಲಕರ ಸಮ್ಮುಖದಲ್ಲೇ ಸಪ್ತಪದಿ ತುಳಿದ ಜೋಡಿ, ಹೊಸ ಜೀವನ ಆರಂಭಿಸಿದ್ದಾರೆ.
Advertisement
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬೇಗುರಿನ ಅಕ್ಷಯನಗರದ ವಿನಾಯಕ ದೇವಸ್ಥಾನದಲ್ಲಿ ಈ ಅಂಧ ಜೋಡಿಗೆ ಆಟೋ ಚಾಲಕರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ವಧುವಿಗೆ 3 ಗ್ರಾಂ ಚಿನ್ನದ ತಾಳಿ, ಕಾಲುಂಗುರ, ಸೀರೆ ಹಾಗೂ ವರನಿಗೆ ಬಟ್ಟೆ ಕೊಡಿಸಿ, ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ವಧು-ವರನಿಗೆ ತಂದೆ ತಾಯಿ, ಸಂಬಂಧಿಕರು ಇರಲಿಲ್ಲ. 400 ಆಟೋ ಚಾಲಕರೇ ಇಂತಿಷ್ಟು ಹಣ ಸಂಗ್ರಹಿಸಿ ಮದುವೆ ಕಾರ್ಯಕ್ರಮ ಮಾಡಿದ್ದಾರೆ. ಇದನ್ನೂ ಓದಿ: Bengaluru-Mysuru Expressway ನಲ್ಲಿ ಬೇಸಿಗೆ ಮಳೆಗೇ ಅವಾಂತರ- ವಾಹನ ಸವಾರರ ಪರದಾಟ
Advertisement
Advertisement
ವರ ಮಂಜುನಾಥ್ ಕೋಲಾರ ಮೂಲದವರಾಗಿದ್ದು, ಬಿಎ ವ್ಯಾಸಂಗ ಮಾಡಿದ್ದಾರೆ. ವಧು ದೇವಿರಮ್ಮ ಹಾಸನ ಮೂಲದವರು. ಅವರಿಬ್ಬರು ಹುಟ್ಟುತ್ತಲೇ ಅಂಧರು. ವಯಸ್ಸು 30 ದಾಟಿದರೂ ಇಬ್ಬರಿಗೆ ಮದುವೆಯ ಭಾಗ್ಯ ಬಂದಿರಲಿಲ್ಲ. ಹೀಗೆ ಕುಗ್ಗಿ ಹೋಗುತ್ತಿದ್ದ ಸಮಯದಲ್ಲೇ ಇಬ್ಬರಿಗೆ ಪ್ರೀತಿ ಚಿಗುರೊಡೆದಿತ್ತು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಇದೀಗ ಅಂಧ ಜೋಡಿಯ ಬಾಳಿಗೆ 400 ಆಟೋ ಚಾಲಕರು ಬೆಳಕಾಗಿದ್ದಾರೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ