ಬೆಂಗಳೂರು: ಕೊರೊನಾ ಹೊಡೆತಕ್ಕೆ ನಲುಗಿರುವ ಆಸ್ಪತ್ರೆಯ ಹೌಸ್ ಕೀಪಿಂಗ್ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರ ಕುಟುಂಬಗಳಿಗೆ ಬಸವ ಕೇಂದ್ರ ವಿಜಯನಗರ ಹಾಗೂ ಪಿಜಿ ಅಸೋಸಿಯೇಷನ್ ನೆರವಾಗಿದೆ.
Advertisement
ನಾಲ್ಕು ನೂರು ಕುಟುಂಬಗಳಿಗೆ 15 ದಿನಕ್ಕಾಗುವಷ್ಟು ದಿನಸಿಯನ್ನು ವಿಜಯನಗರ, ನಾಗರಭಾವಿ, ಹಂಪಿ ನಗರ ಸೇರಿದಂತೆ ಹಲವೆಡೆ ವಿತರಿಸಲಾಯಿತು. ಕೋವಿಡ್ ಸಂಕಷ್ಟದಲ್ಲೂ ಜನರ ಸೇವೆ ಮಾಡುತ್ತಿರುವ, ಆಸ್ಪತ್ರೆಗಳಲ್ಲಿನ ಹೌಸ್ ಕೀಪಿಂಗ್ ಸಿಬ್ಬಂದಿ, ಪೌರ ಕಾರ್ಮಿಕರಿಗೆ ನೆರವಾಗುವ ಮೂಲಕ ರಾಜ್ಯ ಪಿಜಿ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ಕೊರೊನಾ ವಾರಿಯರ್ಸ್‍ಗಳನ್ನು ನೆನೆದು ಗದ್ಘತಿಕರಾದ ಅರುಣ್ ಕುಮಾರ್, ಕೊರೊನಾ ಕಷ್ಟ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡ್ತಿದ್ದಾರೆ. ಅವರ ಶ್ರಮ ಹಾಗೂ ಜನರ ಮೇಲಿನ ಕಾಳಜಿಗೆ ನಮ್ಮದೊಂದು ಅಳಿಲು ಸೇವೆ ಅಂತ ಮಾತನಾಡಿದರು. ಇದನ್ನೂ ಓದಿ: 200 ಕುಟುಂಬಗಳಿಗೆ ತಲಾ 3000 ನೀಡಿದ ಅಮೆರಿಕದಲ್ಲಿ ನೆಲೆಸಿರೋ ಕನ್ನಡಿಗ
Advertisement
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹಲವಾರು, ಎನ್‍ಜಿಒ, ಸೆಲೆಬ್ರಿಟಿ, ಗಣ್ಯರು, ಕಂಪನಿಗಳು ಹೀಗೆ ಅನೇಕರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಹಲವರಿಗೆ ಅನೇಕರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.