ಬೆಂಗಳೂರು: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ (40 Percent Commission) ಪಡೆಯುವ ಆರೋಪ ಹೊತ್ತಿರುವ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರ ಅಣಕಿಸುವ ಪೋಸ್ಟರ್‌ನ್ನು ನಗರದ ಹಲವೆಡೆ ಅಂಟಿಸಲಾಗಿದೆ. ಪೇಟಿಎಂ (Paytm) ಮಾದರಿಯಲ್ಲೇ ಪೇ ಸಿಎಂ (Paycm Poster) ಎಂಬ ಪೋಸ್ಟರ್ ವೈರಲ್ ಆಗಿದೆ.
ನಗರದ ಜಯಮಹಲ್ ರಸ್ತೆ, ಇಂಡಿಯನ್ ಎಕ್ಷ್‌ಪ್ರೆಸ್ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ (Basavaraj Bommai) ಅವರ ಭಾವಚಿತ್ರವಿರುವ ಪೋಸ್ಟರ್ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದೆ. 40% accepted here ಎಂದು ಪೋಸ್ಟರ್‌ನಲ್ಲಿ ಒಕ್ಕಣೆ ಬರೆಯಲಾಗಿದೆ. ಇದನ್ನೂ ಓದಿ: ಮತ್ತೆ 40 ಪರ್ಸೆಂಟ್ ಕಮಿಷನ್ ದಂದೆ ಸದ್ದು – SC, ST ಗುತ್ತಿಗೆದಾರರಿಂದಲೂ ಆರೋಪ
Advertisement
Advertisement
ಪೇಟಿಎಂ ಮಾದರಿಯಲ್ಲಿ ಪೇ ಸಿಎಂ ಎಂದು ಕ್ಯೂಆರ್ ಕೋಡ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ದೂರು ನೀಡಲು ಸಹಾಯವಾಣಿ ನಂಬರ್ ಹಾಕಿರುವ ಪೋಸ್ಟರ್‌ನ್ನು ಬೆಂಗಳೂರಿನ ಹಲವೆಡೆ ಅಂಟಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿಯೂ ಪೋಸ್ಟರ್ ಹಾಕಲಾಗಿದೆ.
Advertisement
ಇದನ್ನು ಸ್ಕ್ಯಾನ್ ಮಾಡಿದರೆ 40% ಸ್ಕ್ಯಾಮ್ ಸ್ಟಾರ್ಸ್ ಎನ್ನುವ ಪೇಜ್ ಓಪನ್ ಆಗುತ್ತದೆ. ರೋಡ್ ಸ್ಕ್ಯಾಮ್, ಬಿಟ್‌ಕಾಯಿನ್ ಸ್ಕ್ಯಾಮ್, ಪಿಎಸ್‌ಐ ಸ್ಕ್ಯಾಮ್ ಎನ್ನುವ ಪೇಜ್ ಬರುತ್ತದೆ. ಸ್ಕ್ಯಾನ್ ಮಾಡಿದವರ ಸಂಖ್ಯೆ ಇಲ್ಲಿಯವರೆಗೆ 95,428 ಆಗಿದೆ. ಸ್ಕ್ಯಾನ್ ಮಾಡಿದ ಕೂಡಲೇ ಅಭಿಯಾನಕ್ಕೆ ಆ್ಯಡ್ ಆಗಿದ್ದೀರಿ ಎಂದು ಮೆಸೇಜ್ ಬರುತ್ತದೆ. ಇದನ್ನೂ ಓದಿ: 40 ಪರ್ಸೆಂಟ್ ಸರ್ಕಾರದಲ್ಲಿ 3ನೇ ಸಿಎಂ ಸೀಟು ಹತ್ತುವ ಕಾಲ ಬಂದಿದೆ: ಬೊಮ್ಮಾಯಿ ಕಾಲೆಳೆದ ಕಾಂಗ್ರೆಸ್
Advertisement
ಸರ್ಕಾರ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ಇತ್ತೀಚೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh patil) ಕೂಡ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಚಿವರಾಗಿದ್ದ ಈಶ್ವರಪ್ಪ (K.S.Eshwarappa) ಅವರ ವಿರುದ್ಧ ಸಂತೋಷ್ ಗಂಭೀರ ಆರೋಪ ಮಾಡಿದ್ದರು. ನಂತರ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.