ವಯಸ್ಸಾಯ್ತು ಮದುವೆಗೆ ಹುಡುಗಿ ಸಿಗ್ತಿಲ್ಲ, ಕಂಕಣಭಾಗ್ಯ ಕರುಣಿಸು – 40 ಜನರಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ

Public TV
Public TV - Digital Head
1 Min Read

ಮಂಡ್ಯ: ವಯಸ್ಸು 40 ಆಯ್ತು ಮದುವೆಗೆ ಹುಡುಗಿ ಸಿಗ್ತಿಲ್ಲ, ಕಂಕಣಭಾಗ್ಯ ಕರುಣಿಸು ಎಂದು ಜಿಲ್ಲೆಯ 40 ಜನ ಅವಿವಾಹಿತರು ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwar Hill) ಪಾದಯಾತ್ರೆಗೆ ತೆರಳಿದ್ದಾರೆ.

ಮಂಡ್ಯ ಜಿಲ್ಲೆಯ ಅವ್ವೇರಹಳ್ಳಿಯ ಅವಿವಾಹಿತ ರೈತರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಈ ಸಮಸ್ಯೆಯಿಂದ ರೋಸಿ ಹೋದ ಜನ ಮಾದಪ್ಪನ ಮೊರೆ ಹೋಗಿದ್ದಾರೆ.ಇದನ್ನೂ ಓದಿ: ಕನ್ನಡ ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ನೋಟಿಫಿಕೇಶನ್‌ನಲ್ಲಿ ಅಕ್ಷರದೋಷ ಸರಿಪಡಿಸ್ತೇವೆ ಎಂದ BMRCL

ಪ್ರತಿ ಊರಿನಲ್ಲಿಯೂ 7-8 ಜನ ಸೇರಿ ಮಂಡ್ಯ ಜಿಲ್ಲೆಯಾದ್ಯಂತ ಸಾವಿರಾರು ಅವಿವಾಹಿತರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಹುಡುಗಿ ನೋಡಲು ಹೋದರೆ ಬೆಂಗಳೂರಿನಲ್ಲಿ ಇದ್ದೀಯಾ? ಇಂಜಿನಿಯರ್? ಡಾಕ್ಟರ್? ಅಥವಾ ಸರ್ಕಾರಿ ಉದ್ಯೋಗ ಇದ್ಯಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಮದುವೆಯಾಗಲು ಹೆಣ್ಣು ಸಿಗದೇ ವಯಸ್ಸು 40 ದಾಟುತ್ತಿದೆ.

ಈ ಸಮಸ್ಯೆಯಿಂದ ಬೇಸತ್ತು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಎಷ್ಟೇ ಹುಡುಗಿ ನೋಡಿದರೂ ಮದುವೆಯಾಗಲು ಹುಡುಗಿಯರು ಹಾಗೂ ಪೋಷಕರು ಒಪ್ಪುತ್ತಿಲ್ಲ. ಇನ್ನೂ ಕೆಲವರು ರೈತ ಎಂದರೆ ಹುಡುಗಿಯನ್ನು ತೋರಿಸುವುದಿಲ್ಲ ಎಂದು ಅವಿವಾಹಿತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸದ್ಯ ಮಾದಪ್ಪ ಆದಷ್ಟು ಬೇಗ ಕಂಕಣ ಭಾಗ್ಯ ಕೊಡಿಸಪ್ಪ ಎಂದು ಪಾದಯಾತ್ರೆ ಮೂಲಕ ಮಾದಪ್ಪನಲ್ಲಿ ಕೇಳಿಕೊಂಡಿದ್ದಾರೆ.ಇದನ್ನೂ ಓದಿ: ರಾಜ್ಯಸಭೆಯಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಈರಣ್ಣ ಕಡಾಡಿ

Share This Article