ಬೆಂಗಳೂರು: ಮಳೆ (Rain) ಬಂದು ಇಂದಿಗೆ ಸರಿಯಾಗಿ ವಾರವಾಯ್ತು. ಮಳೆ ನಿಂತ್ರು ಇನ್ನೂ ಈ ಭಾಗದಲ್ಲಿ ನೀರು ಮಾತ್ರ ಕಡಿಮೆ ಆಗಿಯೇ ಇಲ್ಲ. ರಸ್ತೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ರೂ ವಿಲ್ಲಾ, ಅಪಾರ್ಟ್ ಮೆಂಟ್‍ಗಳಲ್ಲಿ ನೀರು ಮಾತ್ರ ಹೊರಹಾಕುವ ಕೆಲಸ ಇನ್ನೂ ನಿಂತಿಲ್ಲ. ಯಮಲೂರು, ಬೆಳ್ಳಂದೂರು, ಇಕೋಸ್ಪೇಸ್ ನಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿವೆ.
Advertisement
ಹೌದು. ಇಂದಿಗೆ ಬೆಂಗಳೂರಿಗೆ ಮಹಾಮಳೆ (Bengaluru Rain) ಬಂದು ಒಂದು ವಾರ ಕಳೆದಿದೆ. ಆದರೆ ಮಳೆ ಅವಾಂತರ ಮಾತ್ರ ಇನ್ನೂ ನೀಗಿಲ್ಲ. ಯಮಲೂರಿ(Yamaluru) ನಲ್ಲಿರೋ ರಾಜಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಮಳೆ ನೀರಿನೊಂದಿಗೆ ಮೋರಿ ನೀರು ಕ್ರಾಸ್ ವಿಂಡಸ್ ಅನ್ನೋ ವಿಲ್ಲಾ (Villa) ಗೆ ನುಗ್ಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ – ಡೆಸ್ಕ್‌ಟಾಪ್ ಹೊತ್ತೊಯ್ದು ಕಾಫಿ ಶಾಪ್‍ನೇ ಆಫೀಸ್ ಮಾಡ್ಕೊಂಡ
Advertisement
Advertisement
ಸರಿಯಾದ ರಸ್ತೆ ಇಲ್ಲದ ಕಾರಣ ನೀರು ಹೊರಹಾಕಲು ಈವರೆಗೂ ಆಗಿಲ್ಲ. ಈ ಜಾಗದಲ್ಲಿ ಒಟ್ಟು 8 ಮನೆಗಳಿದ್ದು 10 ಅಡಿಯಷ್ಟು ನೀರು ತುಂಬಿತ್ತು, ಈಗ ಅದರ ಪ್ರಮಾಣ 5 ಅಡಿಗೆ ಬಂದಿದೆ. ಮೋರಿ ನೀರು ನಿಂತು ಇಡೀ ಏರಿಯಾ ಗಬ್ಬು ವಾಸನೆಯಿಂದ ಕೂಡಿದೆ.
Advertisement
ಇದು ವಿಲ್ಲಾದ ಸ್ಥಿತಿಯಾಗಿದ್ರೇ ಇಕೋಸ್ಪೇಸ್ (EcoSpace) ಮುಂಭಾಗದಲ್ಲೇ ಇರೋ ಸ್ಟರ್ಲಿಂಗ್ ಅಸೆನ್ಷಿಯ ಅನ್ನೋ ಅಪಾರ್ಟ್ ಮೆಂಟ್‍ನ ಬೆಸ್‍ಮೆಂಟ್‍ಗೆ ನೀರು ನುಗ್ಗಿದ್ದು, 40ಕ್ಕೂ ಹೆಚ್ಚು ಕಾರು (Car) ಗಳು ಒಂದು ವಾರದಿಂದ ನೀರಿನಲ್ಲೇ ಇದ್ದು ಸಂಪೂರ್ಣ ಹಾಳಾಗಿದೆ. ಕಾರು ಹೊರ ತೆಗೆಯಲು ಇನ್ನೂ ಸಹ ಆಗಿಲ್ಲ. ಒಟ್ಟಿನಲ್ಲಿ ಮಳೆ ನಿಂತು ಒಂದು ವಾರವಾದ್ರೂ ಅವಾಂತರಗಳು ಮಾತ್ರ ಮುಗಿದಿಲ್ಲ.