– ಎರಡು ಮಾರಣಾಂತಿಕ ಕಾಯಿಲೆ ಗೆದ್ದು ಬಂದ ಪುಟಾಣಿ
ದುಬೈ: ದುಬೈನಲ್ಲಿ ನೆಲೆಸಿರುವ ಭಾರತ ಮೂಲದ 4 ವರ್ಷದ ಬಾಲಕಿ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದಳು. ಇತ್ತ ಕ್ಯಾನ್ಸ್‌ರ್ ಗೆ ಚಿಕಿತ್ಸೆ ಪಡೆದು ಕೆಲ ತಿಂಗಳ ಹಿಂದೆಯಷ್ಟೇ ಗುಣಮುಖಳಾಗಿದ್ದಳು. ಇದೇ ವೇಳೆ ಮಹಾಮಾರಿ ಕೊರೊನಾ ಬಾಲಕಿಗೆ ತಗುಲಿದ್ದು, ಈಗ ಈ ಎರಡೂ ಮಾರಣಾಂತಿಕ ಕಾಯಿಲೆಯನ್ನು ಬಾಲಕಿ ಗೆದ್ದು ವೈದ್ಯರನ್ನೇ ಅಚ್ಚರಿಗೊಳಿಸಿದ್ದಾಳೆ.
Advertisement
ಯುಎಇನಲ್ಲಿ ಕೊರೊನಾ ವೈರಸ್‍ನಿಂದ ಗುಣಮುಖರಾದ ಕಿರಿಯ ರೋಗಿಗಳಲ್ಲಿ ಈ ಪುಟಾಣಿ ಬಾಲಕಿಯೂ ಒಬ್ಬಳಾಗಿದ್ದಾಳೆ. ಭಾರತ ಮೂಲದ ಶಿವಾನಿ ಕ್ಯಾನ್ಸ್‌ರ್ ಹಾಗೂ ಕೊರೊನಾ ಎರಡರಿಂದಲೂ ಗುಣವಾಗಿದ್ದಾಳೆ. ಆರೋಗ್ಯ ಕಾರ್ಯಕರ್ತೆಯಾಗಿ ಶಿವಾನಿ ತಾಯಿ ಸೇವೆ ಸಲ್ಲಿಸುತ್ತಿದ್ದರು. ಅವರು ಏಪ್ರಿಲ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.
Advertisement
Advertisement
ಈ ಬಗ್ಗೆ ತಿಳಿದ ಬಳಿಕ ಶಿವಾನಿ ಹಾಗೂ ಆಕೆಯ ತಂದೆಯನ್ನು ಕೂಡ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಯಾವುದೇ ರೋಗ ಲಕ್ಷಣಗಳು ಕಂಡುಬಾರದಿದ್ದರೂ ಬಾಲಕಿಯ ವರದಿ ಮಾತ್ರ ಪಾಸಿಟಿವ್ ಬಂದಿತ್ತು. ಆಸ್ಪತ್ರೆಯಲ್ಲಿ ಶಿವಾನಿ ಹಾಗೂ ಆಕೆಯ ತಾಯಿಗೆ ಒಂದೇ ರೀತಿಯ ಸೌಲಭ್ಯ ನೀಡಲಾಗುತಿತ್ತು. ಆದರೆ ಕೊರೊನಾ ಸೋಂಕಿಗೆ ತುತ್ತಾಗುವ ಮೊದಲು ಶಿವಾನಿಗೆ ಕಿಡ್ನಿ ಕ್ಯಾನ್ಸರ್ ಇತ್ತು. ಆದರೆ ಅದರಿಂದ ಆಕೆ ಚೇತರಿಸಿಕೊಂಡಿದ್ದಳು. ಅಷ್ಟರಲ್ಲಿ ಕೊರೊನಾಗೆ ತುತ್ತಾದ ಕಾರಣಕ್ಕೆ ಶಿವಾನಿ ಮೇಲೆ ಹೆಚ್ಚು ನಿಗಾ ವಹಿಸಲಾಗಿತ್ತು. ಶಿವಾನಿ ಗುಣಮುಖಳಾದ ಬಳಿಕ ಏಪ್ರಿಲ್ 20ರಂದು ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
Advertisement
ಕ್ಯಾನ್ಸ್‌ರ್ ಯಿದ್ದ ಹಿನ್ನೆಲೆ ಕಳೆದ ವರ್ಷ ಶಿವಾನಿಗೆ ಕೆಮೊ ಥೆರಪಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಈಗಲೂ ಆಕೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಕೊರೊನಾ ಸೋಂಕಿನಿಂದ ಉಸಿರಾಟದ ತೊಂದರೆಯಿಂದ ಶಿವಾನಿ ಬಳಲುತ್ತಿದ್ದಳು. ಆಕೆ ಮೇಲೆ ಹೆಚ್ಚಿನ ನಿಗಾವಹಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದರು.
ಶಿವಾನಿಗೆ ಸ್ವಾಬ್ ಪರೀಕ್ಷೆಯಲ್ಲಿ ಸತತ ಎರಡು ಬಾರಿ ನೆಗೆಟಿವ್ ಬಂದ ನಂತರ 20 ದಿನಗಳ ಕಾಲ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಇದೀಗ 14 ದಿನಗಳ ಕಾಲ ಆಕೆಯನ್ನು ಹೋಮ್ ಕ್ವಾರಂಟೈನಲ್ಲಿ ಇರಿಸುವಂತೆ ಸೂಚಿಸಲಾಗಿದ್ದು, ಆಕೆಯ ತಾಯಿ ಕೂಡ ಕೊರೊನಾದಿಂದ ಚೇತರಿಕೊಳ್ಳುತ್ತಿದ್ದು, ಸದ್ಯದಲ್ಲೇ ಅವರನ್ನೂ ಡಿಸ್ಚಾರ್ಜ್ ಮಾಡಲಾಗುತ್ತೆ ಎನ್ನಲಾಗಿದೆ.