ಗದಗ: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ನಾಲ್ವರು ಕಾಮುಕರನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಿಜಯ್, ದುರುಗಪ್ಪ, ಶರೀಫ್ ಮತ್ತು ಯಶವಂತ್ ಬಂಧಿತ ಆರೋಪಿಗಳು. ಇವರು ಬಸ್ ನಿಲ್ದಾಣ, ಕಾಲೇಜ್ ಬಳಿ, ಸಂತೆ ಮಾರುಕಟ್ಟೆ ಬಳಿ ಕುಡಿದ ಮತ್ತಿನಲ್ಲಿ ತ್ರಿಬಲ್ ರೈಡಿಂಗ್ ಮೂಲಕ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು.
ಈ ವಿಚಾರವನ್ನು ಮಹಿಳೆಯರು ನರಗುಂದ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಪೊಲಿಸರು ಸ್ಥಳಕ್ಕೆ ದೌಡಾಯಿಸಿ ಗದಗ ಜಿಲ್ಲೆ ನರಗುಂದ ಪಟ್ಟಣದ ಬಸ್ ನಿಲ್ದಾಣದ ಬಳಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ.
ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.