ಕೋಲ್ಕತ್ತಾ: 4 ವರ್ಷದ ಬಾಲಕಿ ಮೇಲೆ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಕೋಲ್ಕತ್ತಾದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿದೆ.
ಇಲ್ಲಿನ ರಾಣಿಕುತಿಯ ಪ್ರತಿಷ್ಠಿತ ಜಿಡಿ ಬಿರ್ಲಾ ಸೆಂಟರ್ ಫಾರ್ ಎಜುಕೇಷನ್ ಶಾಲೆಯಲ್ಲಿಜೀ ಘಟನೆ ನಡೆದಿದೆ. ದೈಹಿಕ ತರಬೇತಿ ಶಿಕ್ಷಕ ಬಾಲಕಿಯನ್ನ ಟಾಯ್ಲೆಟ್ಗೆ ಕರೆದೊಯ್ದಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಬಾಲಕಿ ಸಮವಸ್ತ್ರದ ಮೇಲೆ ರಕ್ತದ ಕಲೆಗಳೊಂದಿಗೆ ಮನೆಗೆ ಹಿಂದಿರುಗಿದ್ದು, ಅಳುತ್ತಿದ್ದಳು. ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿರೋದನ್ನ ತಾಯಿ ನೋಡಿದ್ದರು. ಕೂಡಲೇ ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ.
ನಂತರ ಬಾಲಕಿ ನಡೆದ ಘಟನೆಯನ್ನ ಪೋಷಕರ ಬಳಿ ವಿವರಿಸಿದ್ದು, ಫೋಟೋದಿಂದ ದೈಹಿಕ ತರಬೇತಿ ಶಿಕ್ಷಕನನ್ನು ಗುರುತಿಸಿದ್ದಾಳೆ. ಆಕೆ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಫಲಿತಾಂಶ ಹೊರಬರಬೇಕಿದೆ.
ಬಾಲಕಿಯ ಪೋಷಕರು ಕೋಲ್ಕತ್ತಾ ಪೊಲೀಸರ ಬಳಿ ಎಫ್ಐಆರ್ ದಾಖಲಿಸಿದ್ದಾರೆ.