– ಬೆಂಗಳೂರು ಪೊಲೀಸರಿಂದ ಕಳ್ಳರು ಅರೆಸ್ಟ್
ಬೆಂಗಳೂರು: ದೇವಸ್ಥಾನದ ಹುಂಡಿಗೆ 1 ರೂ. ನಾಣ್ಯ ಹಾಕಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕುಮಾರ, ಮಂಜ, ಕೃಷ್ಣ, ವಿಜಯ, ಈ ನಾಲ್ವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಸ್ಟವ್ ರಿಪೇರಿ ಮಾಡೋದಾಗಿ ಏರಿಯಾಗಳಲ್ಲಿ ಓಡಾಡಿ ಕಳ್ಳತನ ಮಾಡುತ್ತಿದ್ದರು.
ಈ ವೇಳೆ ಏರಿಯಾ ಸುತ್ತಾಡುವಾಗ ದೇವಸ್ಥಾನ ಕಂಡರೆ ಆರೋಪಿಗಳಿಗೆ ಎಲ್ಲಿಲ್ಲದ ಭಕ್ತಿ ಮೂಡುತ್ತಿತ್ತು. ಒಮ್ಮೆ ದೇವಸ್ಥಾನದ ಒಳಗೆ ಪ್ರವೇಶಿಸಿದರೆ ಅವರ ಕಣ್ಣು ಹುಂಡಿಯ ಮೇಲೆ ಬೀಳುತ್ತಿದ್ದು, ಹುಂಡಿಯಲ್ಲಿ ಹಣ ಇದೆಯಾ ಇಲ್ಲವೇ ಎನ್ನುವುದನ್ನು 1 ರೂ. ನಾಣ್ಯ ಹಾಕಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಬಳಿಕ ಹಣ ಇದೆ ಅಂತ ಗೊತ್ತಾದರೆ ಹುಂಡಿಯನ್ನೇ ಕಳ್ಳತನ ಮಾಡುತ್ತಿದ್ದರು.
ಆರೋಪಿಗಳು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಮೈಕೋಲೇಔಟ್ ಇನ್ಸ್ ಪೆಕ್ಟರ್ ಅಜಯ್ ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಪೊಲೀಸರು ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳ ಬಂಧನದಿಂದ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ದ 17 ಪ್ರಕರಣಗಳು ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv