ಬೆಂಗಳೂರು: 4 ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ (4 State Elections Results) ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು (Congress Guarantee) ಠುಸ್ ಪಟಾಕಿ ಆಗಿದೆ, ಯಾವುದೇ ಪರಿಣಾಮ ಬೀರಿಲ್ಲ. ಅಲ್ಲಿ ಮೋದಿ ಅವರ ಪ್ರಭಾವ ಎದ್ದು ಕಾಣುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ್ (R. Ashoka) ಹೇಳಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ಅಶೋಕ್, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿ ಸ್ವೀಪ್ ಆಗಲಿದೆ. ತೆಲಂಗಾಣದಲ್ಲೂ ಬಿಜೆಪಿಗೆ 11 ಸ್ಥಾನ ಈಗ ಬಂದಿದೆ. ಎಲ್ಲ ಕಡೆ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳುತ್ತಿದೆ. ಮೋದಿಯವರ (Narendra Modi) ಪ್ರಭಾವ ಎಲ್ಲ ಕಡೆ ಕಾಣ್ತಿದೆ. ಛತ್ತಿಸ್‌ಗಢದಲ್ಲೂ ಬಿಜೆಪಿ ಗೆಲ್ಲುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ.
Advertisement
Advertisement
ಕಾಂಗ್ರೆಸ್‌ನವರು (Congress) ರೆಸಾರ್ಟ್ ರಾಜಕಾರಣ ಮಾಡಲು ಹೊರಟಿದೆ. ದೊಡ್ಡ ಶೋ ಕೊಡಲು ಡಿಕೆಶಿ ತೆಲಂಗಾಣಕ್ಕೆ ಹೋಗಿದ್ದಾರೆ. ಜನರ ಕಷ್ಟ ಮರೆತು ತೆಲಂಗಾಣ ಶಾಸಕರಿಗಾಗಿ ಡಿಕೆಶಿ ಹೋಗಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್ ಹಾಕಿದ ಕಾಂಗ್ರೆಸ್
Advertisement
ಬಿಆರ್‌ಎಸ್ ಕುಟುಂಬ ರಾಜಕಾರಣದಿಂದಾಗಿ ತೆಲಂಗಾಣ ಕಳೆದುಕೊಂಡಿದೆ. ತೆಲಂಗಾಣದಲ್ಲಿ 11 ಬಂದಿರೋದು ಬಿಜೆಪಿಯ ದೊಡ್ಡ ಸಾಧನೆಯೇ ಆಗಿದೆ. ಬಿಜೆಪಿಗೆ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಭವಿಷ್ಯವಿದೆ. ಕಾಂಗ್ರೆಸ್ ಎರಡು ರಾಜ್ಯ ಕಳೆದುಕೊಂಡಿದೆ, ಬಿಜೆಪಿ ಸೊನ್ನೆಯಿಂದ 2 ರಾಜ್ಯ ಗಳಿಸಿದೆ. ಚುನಾವಣಾ ಫಲಿತಾಂಶದ ಬಳಿಕ ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಇನ್ಮುಂದೆ ಬಿಜೆಪಿಗೆ ಬರುವವರ ಸಂಖ್ಯೆ ಗೆಚ್ಚಾಗುತ್ತೆ. ಕಾಂಗ್ರೆಸ್‌ನ ಭಿನ್ನಮತೀಯರು ಬಿಜೆಪಿಗೆ ಬರ್ತಾರೆ. ಮುಖ್ಯವಾಗಿ ಈ ರಾಜ್ಯಗಳ ಫಲಿತಾಂಶದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದು ಜನರಿಗೆ ಅರ್ಥವಾಗಿದೆ.
Advertisement
ತೆಲಂಗಾಣ ಕಾಂಗ್ರೆಸ್ ನವರಿಗೆ ಧಮ್ ಇಲ್ಲ:
ತೆಲಂಗಾಣ ಕಾಂಗ್ರೆಸ್ ನವರಿಗೆ ಧಮ್ ಇಲ್ಲ, ಬರಗಾಲ ಬಂದಾಗ ಸಿದ್ದರಾಮಯ್ಯ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಇವಾಗ ಅವರದ್ದು ಬರೀ ಮೊಸಳೆ ಕಣ್ಣೀರು ಆಗಿದೆ. ಅಧಿವೇಶನ ಇದೆ, ಆದ್ರೆ ಇವರು ಹೋಗಿ ಅಲ್ಲಿ ತೆಲಂಗಾಣದ ಸೇವೆ ಮಾಡ್ತಿದ್ದಾರೆ. ಮುಂದೆ ಇವರಿಗೆ ಜನರು ತಕ್ಕ ಪಾಠ ಕಲಿಸ್ತಾರೆ. ಅಧಿವೇಶನದಲ್ಲಿ ಬರದ ಬಗ್ಗೆ ಮಾತಾಡೋದು ಬಿಟ್ಟು, ಇಲ್ಲಿ ರೆಸಾರ್ಟ್‌ನಲ್ಲಿ ಶಾಸಕರ ಸೇವೆ ಮಂತ್ರಿಗಳು ಮಾಡಿದ್ರೆ, ಅದರ ಪರಿಣಾಮ ನೆಟ್ಟಗಿರಲ್ಲ. ಅವರಿಗೆ ಹೋರಾಟ ಪ್ರತಿಭಟನೆ ಗಳ ಮೂಲಕ ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ತೆಲಂಗಾಣ, ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಕೈ ಹಿಡಿಯುತ್ತಾ ಗ್ಯಾರಂಟಿ?