ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ದೋಡಾ ಜಿಲ್ಲೆಯಲ್ಲಿ ಉಗ್ರರ ಜೊತೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ (Encounter) ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಭಾರತೀಯ ಸೇನಾ (Indian Army) ಯೋಧರು ಹುತಾತ್ಮರಾಗಿದ್ದಾರೆ.
ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೋಡಾದ (Doda) ದೇಸಾದ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿ 9 ಗಂಟೆಯಿಂದ ಉಗ್ರರ ಜೊತೆ ಗುಂಡಿನ ಕಾಳಗ ಆರಂಭವಾಗಿದೆ. ಉಗ್ರರು ಬೆಟ್ಟದ ತುದಿಯಲ್ಲಿ ಅವಿತುಕೊಂಡು ದಾಳಿ ಮಾಡುತ್ತಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುತ್ತಿದೆ.
Advertisement
Op KOTHI – 2
Based on specific intelligence inputs, a joint operation by #IndianArmy and JKP was in progress in General area North of #Doda.
Contact with terrorists was established tonight at about 2100h in which heavy firefight ensued. Initial reports suggest injuries to our…
— White Knight Corps (@Whiteknight_IA) July 15, 2024
Advertisement
ಕಳೆದ ವಾರ ಕಥುವಾದಲ್ಲಿ ಐವರು ಯೋಧರು ಹುತಾತ್ಮರಾದ ನಂತರ ಜಮ್ಮು ಪ್ರದೇಶದಲ್ಲಿ ನಡೆದ ಎರಡನೇ ಪ್ರಮುಖ ಎನ್‌ಕೌಂಟರ್ ಇದಾಗಿದೆ. ಈ ದಾಳಿಯಲ್ಲಿ ಐವರು ಸೈನಿಕರು ಗಾಯಗೊಂಡಿದ್ದರು, ಕನಿಷ್ಠ 12 ಸೈನಿಕರನ್ನು ಹೊತ್ತ ಎರಡು ಟ್ರಕ್‌ಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದನ್ನೂ ಓದಿ: ಹೆಬ್ಬಾಳೆ ಸೇತುವೆ ಮುಳುಗಡೆ , ಕಳಸ-ಹೊರನಾಡು ಸಂರ್ಪಕ ಕಡಿತ
Advertisement
#WATCH | J&K: The Indian Army uses a helicopter to carry out a search operation in the forests of Doda as the hunt for terrorists in the region is on.
Four Indian Army personnel including an Officer have been killed in action during an encounter with terrorists in Doda. pic.twitter.com/a7ydfOgusG
— ANI (@ANI) July 16, 2024
Advertisement
ಭಯೋತ್ಪಾದಕರು 500 ಮೀಟರ್ ದೂರದಿಂದ ಟ್ರಕ್‌ಗಳನ್ನು ಗುರಿಯಾಗಿಸಿ ಗ್ರೆನೇಡ್ ಎಸೆದಿದ್ದರು. ಉಗ್ರರು ಅಸಾಲ್ಟ್ ರೈಫಲ್ ಬಳಸಿ ದಾಳಿ ನಡೆಸಿದ್ದರು. ಜಮ್ಮು ಪ್ರದೇಶ ಭಯೋತ್ಪಾದನೆಯಿಂದ ಮುಕ್ತವಾಗಿತ್ತು. ಲೋಕಸಭಾ ಚುನಾವಣಾ ಸಮಯದಲ್ಲಿ ಜಮ್ಮು ಭಾಗದಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿತ್ತು. ಳೆದ 32 ತಿಂಗಳುಗಳಲ್ಲಿ ಜಮ್ಮು ಪ್ರದೇಶದಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ 48 ಯೋಧರು ಹುತಾತ್ಮರಾಗಿದ್ದಾರೆ.
#WATCH | Morning visuals from the Doda area of Jammu & Kashmir.
An Encounter started late at night in the Dessa area of Doda in which some of the Indian Army troops got injured.
(Visuals deferred by unspecified time) pic.twitter.com/ZQdSSRSjun
— ANI (@ANI) July 16, 2024