ರೈಪುರ್: ದಾಂತೇವಾಡ (Dantewada) ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳನ್ನು (Maoists) ಛತ್ತೀಸ್‍ಗಢದ (Chhattisgarh) ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಮಾವೋವಾದಿಗಳನ್ನು ಬುಧ್ರಾ ಮದ್ವಿ, ಜಿತೇಂದ್ರ ಮುಚಕಿ, ಹಿದ್ಮಾ ಮಡ್ಕಮ್ ಮತ್ತು ಹಿದ್ಮಾ ಮದ್ವಿ ಎಂದು ಗುರುತಿಸಲಾಗಿದೆ. ಇವರೆಲ್ಲ ನಿಷೇಧಿತ ಸಿಪಿಐನ ದರ್ಭಾ ವಿಭಾಗದ (Darbha Division) ಸದಸ್ಯರಾಗಿದ್ದಾರೆ. ಅಪ್ರಾಪ್ತರು 15 ರಿಂದ 17 ವರ್ಷದವರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಓರ್ವನನ್ನು ಜೈಲಿನಲ್ಲಿರಿಸಲಾಗಿದೆ. ಅಪ್ರಾಪ್ತರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ. 26 ರಂದು ದಾಂತೇವಾಡದಲ್ಲಿ ಮಾವೋವಾದಿಗಳು, ಜವಾನರನ್ನು ಸಾಗಿಸುತ್ತಿದ್ದ ವಾಹನವನ್ನು ಐಇಡಿ ಬಳಸಿ ಸ್ಫೋಟಿಸಿದ್ದರು (IED Blast). ಸ್ಪೋಟದಲ್ಲಿ ಹತ್ತು ಜಿಲ್ಲಾ ಶಸ್ತ್ರಾಸ್ತ್ರ ಪಡೆಯ ಯೋಧರು (DRG) ಮತ್ತು ಓರ್ವ ಸ್ಥಳೀಯ ಚಾಲಕ ಸಾವನ್ನಪ್ಪಿದ್ದರು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ