ಮುಂಬೈ: ಗಂಡು ನಾಯಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ಮುಂಬೈನ ಪಶ್ಚಿಮ ಮಲಾಡ್ ಬಳಿಯ ಮಲ್ವಾಣಿ ಪ್ರದೇಶದಲ್ಲಿ ಶನಿವಾರ ನಡೆದಿದ್ದು, ಮಂಗಳವಾರದಂದು ಬೆಳಕಿಗೆ ಬಂದಿದೆ.
ಮಲ್ವಾಣಿ ಚರ್ಚ್ ಬಳಿ ವಾಸವಾಗಿದ್ದ ಬೀದಿ ನಾಯೊಂದು ಒಂದೆರಡು ದಿನಗಳಿಂದ ಕಾಣೆಯಾಗಿತ್ತು. ಮಂಗಳವಾರ ಮಲ್ವಾಣಿ ಪ್ರದೇಶಕ್ಕೆ ವಾಪಸಾಗಿದ್ದ ನಾಯಿಯ ಹಿಂಬದಿಯ ಕಾಲುಗಳು ಗಂಭೀರವಾಗಿ ಗಾಯಗೊಂಡಿತ್ತು. ಇದನ್ನು ನೋಡಿದ ಸ್ಥಳೀಯರು ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ನಾಯಿಯನ್ನು ತೋರಿಸಿದಾಗ ಪ್ರಾಣಿ ಮೇಲೆ ಅತ್ಯಾಚಾರ ನಡೆದಿರುವ ವಿಷಯ ಬೆಳಕಿಗೆ ಬಂದಿದೆ ಎಂದು “ಎನಿಮಲ್ ಮ್ಯಾಟರ್ಸ್ ಟು ಮೀ” ಎಂಬ ಸರ್ಕಾರೇತರ ಸಂಸ್ಥೆಯ ಸಂಸ್ಥಾಪಕ ಡಾ. ಅಂಕಿತ್ ಪಥಾಕ್ ಮಾಹಿತಿ ನೀಡಿದ್ದಾರೆ.
Advertisement
ಈ ಘಟನೆಯನ್ನು ಕಣ್ಣಾರೆ ನೋಡಿದ ಆಟೋ ಚಾಲಕರೊಬ್ಬರು, ಶನಿವಾರ ರಾತ್ರಿ ವೇಳೆ ಮನೆಗೆ ಹೋಗುತ್ತಿದ್ದಾಗ 4 ಯುವಕರು ಒಟ್ಟಾಗಿ ನಾಯಿಗೆ ಅತ್ಯಾಚಾರ ಮಾಡುತ್ತಿದ್ದರು. ನನ್ನ ಗಾಡಿ ಶಬ್ದ ಕೇಳಿ ಅಲ್ಲಿದ್ದ ಓಡಿಹೋದರು ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಡಾ. ಅಂಕಿತ್ ಪಥಾಕ್ ಅವರು ನಾಯಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಲ್ಲದೆ ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಅದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv