ಚಿಕ್ಕಮಗಳೂರು: ನಾಲ್ಕು ಕಾಲಿನ ಪ್ರಾಣಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ 4 ಕಾಲುಗಳುಳ್ಳ ಅಪರೂಪದ ಫಾರಂ ಕೋಳಿ ಕಾಫಿನಾಡಿನಲ್ಲಿ ಕಂಡು ಬಂದಿದ್ದು, ಪ್ರಕೃತಿಯ ವೈಶಿಷ್ಟ್ಯಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಪ್ರಕೃತಿಯ ಒಡಲಾಳದಲ್ಲಿ ಸತ್ಯಗಳು ಇನ್ನೆಷ್ಟಿವೆಯೋ ತಿಳಿದಿಲ್ಲ. ಆದರೆ ಭೂಮಿಯಲ್ಲಿ ಅಪರೂಪದ ಪ್ರಾಣಿ, ಪಕ್ಷಿ, ಜೀವಿಗಳು ಇವೆ ಎನ್ನುವುದು ಬೆಳಕಿಗೆ ಬರುತ್ತಲೇ ಇರುತ್ತದೆ. ಹಾಗೆಯೇ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಇಕ್ಬಾಲ್ ತಾಜ್ ಚಿಕನ್ ಸ್ಟಾಲ್‍ನಲ್ಲಿ 4 ಕಾಲಿನ ಕೋಳಿ ಪತ್ತೆಯಾಗಿದೆ. ಈ ಅಪರೂಪದ ಕೋಳಿ ನೋಡಿ ಚಿಕನ್ ಸ್ಟಾಲ್ ಮಾಲೀಕ ಇಕ್ಬಾಲ್ ಅಚ್ಚರಿಗೊಂಡಿದ್ದಾರೆ.
Advertisement
Advertisement
ಟೆಂಡರ್ ಚಿಕನ್‍ನಿಂದ ಬಂದ ಕೋಳಿ ಬಾಕ್ಸ್ ನಲ್ಲಿ ಈ 4 ಕಾಲಿನ ಕೋಳಿ ಪತ್ತೆಯಾಗಿದೆ. ಈ ರೀತಿಯ ಕೋಳಿಯನ್ನು ನಾನೆಂದೂ ನೋಡಿಲ್ಲ. ನಾಲ್ಕು ಕಾಲಿನ ಪ್ರಾಣಿ ಗೊತ್ತು, ಆದರೆ ಕೋಳಿ ನೋಡಿದ್ದು ಇದೇ ಮೊದಲು ಎಂದು ಮಾಲೀಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
ಈ ಬಗ್ಗೆ ತಿಳಿಯುತ್ತಿದ್ದಂತೆ ಸ್ಟಾಲ್ ಬಳಿ ಸಾಕಷ್ಟು ಮಂದಿ ಜನರು ಬಂದು ಕೋಳಿಯನ್ನು ನೋಡುತ್ತಿದ್ದಾರೆ. ಅದರ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ಈ ಅಪರೂಪದ ಕೋಳಿಯನ್ನು ಮಾರಾಟ ಮಾಡದೆ ಹಾಗೆಯೇ ಮಾಲೀಕ ತಗೆದಿಟ್ಟು, ರಕ್ಷಣೆ ಮಾಡಿದ್ದಾರೆ.