– 48ಕ್ಕೂ ಹೆಚ್ಚು ಜನರಿಗೆ ಗಾಯ
ಮುಂಬೈ: ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ (Explosion) ಹೊತ್ತಿಕೊಡ ಬೆಂಕಿಯಿಂದ 6 ಜನ ಸಾವಿಗೀಡಾದ ಘಟನೆ ಥಾಣೆಯ(Thane) ಡೊಂಬಿವಿಲಿಯಲ್ಲಿ ನಡೆದಿದೆ. ಘಟನೆಯಲ್ಲಿ 48ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Advertisement
ಎಂಐಡಿಸಿ 2ನೇ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಳಗಿನ (Chemical Factory) ಬಾಯ್ಲರ್ ಸ್ಫೋಟಗೊಂಡಿದೆ. ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ. ಹಲವಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆರೋಪಿ ಬಂಧನಕ್ಕೆ ಏಮ್ಸ್ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!
Advertisement
ಕಾರ್ಖಾನೆಯಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ. ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಗಳ ಗಾಜುಗಳು ಒಡೆದು ಹೋಗಿವೆ. ಕಾರು ಶೋರೂಂ ಸೇರಿದಂತೆ ಇನ್ನೆರಡು ಕಟ್ಟಡಗಳಿಗೂ ಬೆಂಕಿ (Fire Accident) ವ್ಯಾಪಿಸಿದೆ. ಅವಘಡದಲ್ಲಿ 10-12 ಕಾರುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.
Advertisement
Advertisement
ಬೆಂಕಿ ನಂದಿಸಲು ಸುಮಾರು 15 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿ ನಂದಿಸಲು ನಾಲ್ಕು ಗಂಟೆಗೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿದ ಮಹಾರಾಷ್ಟ್ರದ (Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis), ಎಂಐಡಿಸಿಯ ಅಮುದನ್ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಇಲ್ಲಿಯವರೆಗೂ ಕಾರ್ಖಾನೆಯ ಒಳಗೆ ಸಿಲುಕಿದ್ದ 8 ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಅಂಬುಲೆನ್ಸ್‍ಗಳನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಎನ್‍ಡಿಆರ್‍ಎಫ್, ಟಿಡಿಆರ್‍ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಇಬ್ಬರು ಸಿಎಂ ಅರೆಸ್ಟ್ ಆದ್ರು.. ಬುಡಕಟ್ಟು ಸಿಎಂ ಇನ್ನೂ ಜೈಲಲ್ಲೇ ಇದ್ದಾರೆ: ರಾಹುಲ್ ಗಾಂಧಿ