ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್-ಹಮಾಸ್-ಹಿಜ್ಬುಲ್ಲಾ ನಡುವಿನ ದಾಳಿಯ ತೀವ್ರತೆ ಹೆಚ್ಚುತ್ತಲೇ ಇದೆ. ಅ.7ಕ್ಕಿಂತ ಭೀಕರವಾಗಿ ದಾಳಿ ನಡೆಸಲು ಹಮಾಸ್ ಪ್ಲಾನ್ ಮಾಡಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಇಸ್ರೇಲ್ ಮೇಲೆ ಭೀಕರ ದಾಳಿ ನಡೆದಿದೆ. ಲೆಬನಾನ್‌ನ ಗಡಿಯುದ್ಧಕ್ಕೂ ಬಾಂಬ್ ದಾಳಿಗಳನ್ನು ವಿಸ್ತರಿಸಿದೆ. ಉತ್ತರದ ನೆಲೆಗಳಲ್ಲಿ ಹಿಜ್ಬುಲ್ಲಾ ಡ್ರೋನ್‌ಗಳು (Hezbollah Drone Strike) ತನ್ನ ನಾಲ್ವರು ಸೈನಿಕರನ್ನು (Israeli Soldiers) ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
Advertisement
ಹೈಫಾ ಬಳಿಯ ಬಿನ್ಯಾಮಿನಾದಲ್ಲಿನ ಮಿಲಿಟರಿ ತರಬೇತಿ ಶಿಬಿರದ ಮೇಲಿನ ದಾಳಿಯು ಸೆಪ್ಟೆಂಬರ್ 23 ನಂತರ ಇಸ್ರೇಲ್ ನೆಲೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ನಡೆಸಿದ್ದು, ತುರ್ತು ಸೇವೆಗಳಲ್ಲಿ ವ್ಯತ್ಯಯವಾಗಿದ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್ ಭೀಕರ ವಾಯುದಾಳಿಗೆ 22 ಮಂದಿ ಬಲಿ – 117 ಮಂದಿಗೆ ಗಾಯ, ಹಿಜ್ಬುಲ್ಲಾ ಟಾಪ್ ಲೀಡರ್ ಸೇಫ್
Advertisement
Advertisement
ಈ ನಡುವೆ ಸ್ಥಳಾಂತರಗೊಂಡ ಜನರಿಗೆ ಆಶ್ರಯ ತಾಣವಾಗಿ ಬಳಸಲಾಗುತ್ತಿದ್ದ ಶಾಲೆಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಒಂದೇ ಕುಟುಂಬದ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ
Advertisement
ಇತ್ತೀಚೆಗಷ್ಟೇ ಇಸ್ರೇಲ್ ಸೇನೆಯು ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Israeli Strikes) 22 ಮಂದಿ ಹತ್ಯೆಯಾಗಿ, ಸುಮಾರು 117 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಈ ದಾಳಿಯಲ್ಲಿ ಹಿಜ್ಬುಲ್ಲಾದ (Hezbollah) ಉನ್ನತ ಅಧಿಕಾರಿಯೊಬ್ಬರು ಬದುಕುಳಿದಿದ್ದರು. ಈ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಅಕ್ಟೋಬರ್ 7ಕ್ಕಿಂತಲೂ ಭೀಕರ ದಾಳಿ ನಡೆಸುವುದಾಗಿ ಒಂದು ದಿನದ ಹಿಂದೆಯಷ್ಟೇ ಎಚ್ಚರಿಕೆ ನೀಡಿದರು. ಅದರಂತೆ ಲೆಬನಾನ್‌ನ ಉತ್ತರ ಗಡಿ ಭಾಗಗಳಲ್ಲಿ ಇಸ್ರೇಲ್ ಸೇನೆ ವಿರುದ್ಧ ದಾಳಿ ನಡೆಸಿದ್ದು ನಾಲ್ವರು ಸೈನಿಕರನ್ನು ಹತ್ಯೆಗೈದಿದೆ.
2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಯುದ್ಧ ವಿಮಾನಗಳು (Israeli Fighter Jets) ಲೆಬನಾನ್‌ನ ಬೆಕಾ ಪ್ರದೇಶ ಮತ್ತು ಬೈರೂತ್‌ನಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. ಮೂಲಸೌಕರ್ಯ ತಾಣಗಳು, ಲಾಂಚರ್‌ಗಳು, ಕಮಾಂಡ್ & ಕಂಟ್ರೋಲ್ ಸೆಂಟರ್‌ಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಭಯಭೀತರಾಗಿರುವ 2.20 ಲಕ್ಷ ಮಂದಿ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.