ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ನಾಲ್ಕು ಗಂಟೆಯ ಮೊದಲೇ ಪ್ಲಾನ್ ನಡೆದಿತ್ತು. ಆಗಂತುಕನೊಬ್ಬ ಸಂಜೆ ನಾಲ್ಕು ಗಂಟೆಗೆ ಮನೆಯ 30 ಅಡಿ ದೂರದಲ್ಲಿಯೇ ಗೌರಿಗಾಗಿ ಕಾದು ಕುಳಿತ್ತಿದ್ದ ಮಾಹಿತಿ ಈಗ ವಿಶೇಷ ತನಿಖಾ ತಂಡ(ಎಸ್‍ಐಟಿ) ಮೂಲಗಳಿಂದ ಸಿಕ್ಕಿದೆ.
ಸಂಜೆ ನಾಲ್ಕು ಗಂಟೆಗೆ ಗೌರಿ ಅವರ ಮನೆಯ ಬಳಿ ಬಂದ ವ್ಯಕ್ತಿಯೊಬ್ಬ ಅವರು ಬರುವುದನ್ನು ಕಾದು ಕುಳಿತಿದ್ದ. ಆತ ಸುಳಿದಾಡುತ್ತಿರುವ ದೃಶ್ಯ ಗೌರಿ ಅವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಆ ಸಿಸಿಟಿವಿ ದೃಶ್ಯಾವಳಿಯಲ್ಲೂ ಸಹ ಕೊಲೆಗಾರನ ಚಹರೆ ಪತ್ತೆಯಾಗಿಲ್ಲ. ಆಗಂತುಕ ಸಂಜೆ ನಾಲ್ಕು ಗಂಟೆಗೆ ಹೆಲ್ಮೆಟ್ ಧರಿಸಿ ಏಕಾಂಗಿಯಾಗಿ ಬಂದಿದ್ದನು. ಕೊಲೆ ಮಾಡುವ ಸಂದರ್ಭದಲ್ಲಿ ಕೂಡ ಹೆಲ್ಮೆಟ್ ಧರಿಸಿದ್ದನು.
Advertisement
ನಾಲ್ಕು ಗಂಟೆಗೆ ಸಿಕ್ಕ ದೃಶ್ಯಾವಳಿಯಲ್ಲೂ ಮತ್ತು ಕೊಲೆ ಮಾಡುವ ಸಂದರ್ಭದಲ್ಲಿ ಸಿಕ್ಕ ದೃಶ್ಯಾವಳಿ ಸಾಮ್ಯತೆ ಇದೆ. ಸಾಮ್ಯತೆ ಇದ್ದಿದ್ರಿಂದಲೇ ಆತನೇ ಕೊಲೆಗಾರ ಅನ್ನೋ ಅನುಮಾನ ಹೆಚ್ಚಾಗಿದ್ದು ತನಿಖೆ ತೀವ್ರಗೊಂಡಿದೆ.
Advertisement
ಆದರೆ ನಾಲ್ಕು ಗಂಟೆಗೆ ಬಂದು ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿ ಪ್ರದೇಶದಿಂದ ಹೊರ ಹೋಗಿಲ್ಲ ಮತ್ತು ಹೊರ ಹೋಗುವ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ. ಈ ಮಾಹಿತಿ ಆಧರಿಸಿ ಕೊಲೆಗಾರ ಅಲ್ಲಿಯೇ ಕುಳಿತಿದ್ದ ಎನ್ನುವ ಅನುಮಾನವೂ ಈಗ ವ್ಯಕ್ತವಾಗಿದೆ.