ಕಾರವಾರ: ಅತಿ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರೊಂದು (Car) ಕೆಎಸ್‌ಆರ್‌ಟಿಸಿ (KSRTC Bus) ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಬಾಳೆಗುಳಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತಪಟ್ಟವರು ತಮಿಳುನಾಡು (Tamil Nadu) ಮೂಲದವರು. ಅರುಣ್ ಪಾಂಡ್ಯನ್, ನಿಫುಲ್, ಮಹ್ಮದ್ ಬಿಲ್ಲಾಲ್, ಶ್ರೇಕರನ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: KSRTC ಎಲೆಕ್ಟ್ರಿಕ್ ಬಸ್ ಸೇವೆಗೆ ಚಾಲನೆ – ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ ಸಂಚಾರ
ಹೊಸ ವರ್ಷಾಚರಣೆ (New Year) ಮುಗಿಸಿ ಗೋವಾದಿಂದ (Goa) ಕಾರಿನಲ್ಲಿ ಐವರು ವಾಪಸ್ಸಾಗುತ್ತಿದ್ದರು. ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ತದಡಿಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಸ್‌ಗೆ ಗುಡ್ಡಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್‌ಟ್ಯಾಂಕ್ ಮೇಲೆ ಕುಳಿತು ಪ್ರಿಯಕರನೊಂದಿಗೆ ರೊಮ್ಯಾನ್ಸ್ – ಪೊಲೀಸರು ಕೊಟ್ರು ಶಾಕ್