ಜೈಪುರ: ಮದುವೆ ಮನೆಯಲ್ಲಿ (Marriage House) ಸಂಭ್ರಮದ ವಾತಾವರಣದಿಂದ ಕೂಡಿರುವಾಗಲೇ ದುರ್ಘಟನೆಯೊಂದು ನಡೆದು, ನಾಲ್ವರು ಅತಿಥಿಗಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಜೋಧ್‌ಪುರ ಬಳಿ ಗುರುವಾರ ನಡೆದಿದೆ.
ಜೋಧ್‌ಪುರದಿಂದ 60 ಕಿ.ಮೀ ದೂರದಲ್ಲಿರುವ ಭುಂಗ್ರಾ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವರನ ಮನೆಯಿಂದ ಮದುವೆ ಮಂಟಪದೆಡೆಗೆ ಮೆರವಣಿಗೆ ಹೊರಡಬೇಕಿದ್ದ ಸ್ವಲ್ಪ ಹೊತ್ತಿಗೂ ಮೊದಲೇ ಸಿಲಿಂಡರ್ ಸ್ಫೋಟಗೊಂಡು (Cylinder Blast) ನಾಲ್ವರು ಅತಿಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು
Rajasthan: 4 killed, over 60 wedding guests injured in gas cylinder explosion in Jodhpur
Read @ANI Story | https://t.co/HNzQlJfHn4#Jodhpur #Rajasthan #CylinderExplosion pic.twitter.com/9w2XfRBeFz
— ANI Digital (@ani_digital) December 9, 2022
ಮೂಲಗಳ ಪ್ರಕಾರ ಮದುವೆ ಊಟವನ್ನು ಸಿದ್ಧಪಡಿಸಲು ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮದುವೆ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ 12 ಜನರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ನಗರದ ಎಂಜಿಹೆಚ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ