ಬಳ್ಳಾರಿ: ಖಾಸಗಿವಾಹಿನಿಯಲ್ಲಿ ಬರುವ ‘ಡ್ರಾಮಾ ಜ್ಯೂನಿಯರ್’ ರಿಯಾಲಿಟಿ ಶೋ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಮಕ್ಕಳು ಓಡಿ ಬಂದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಚಂದ್ರಶೇಖರ್ ಹಾಗೂ ವೀರೇಶ್ ಅವರ ಮಕ್ಕಳು ಬೇಸಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿಯ ನಾಲ್ಕು ಹೆಣ್ಣು ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದರು. ಆಟ ಆಡುವುದು ಬಿಟ್ಟು ಓದಿನ ಕಡೆ ಗಮನ ಕೊಡಿ ಎಂದು ತಂದೆ-ತಾಯಿ ಗದರಿದ್ದಾರೆ. ನಾವು ಕೂಡ ನಮ್ಮ ಕಾಲ ಮೇಲೆ ನಿಲ್ಲಬೇಕು ಎಂದು ನಿರ್ಧಾರ ಮಾಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಬಸ್ ಹತ್ತಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ
ನಿನ್ನೆ ಸಂಜೆ ಆರು ಘಂಟೆಗೆ ಕುರಗೋಡು ಬೆಂಗಳೂರು ಬಸ್ ಹತ್ತಿದ್ದ ನಾಲ್ಕು ಜನ ಮಕ್ಕಳ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಮಕ್ಕಳನ್ನು ನೋಡಿದ ಬಸ್ ನಿರ್ವಾಹಕ ಅನುಮಾನಗೊಂಡು ನೀವು ಯಾರು ಎಲ್ಲಿಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಮಕ್ಕಳು ಯಾವುದನ್ನು ಹೇಳದೇ ಎಲ್ಲವನ್ನೂ ಮರೆ ಮಾಚಿದ್ದಾರೆ.
ಯಾವಾಗ ಬೆಂಗಳೂರು ತಲುಪಿದ್ರೋ, ಆಗ ಬೆಂಗಳೂರು ನಗರ ನೋಡಿ ಗಾಬರಿಯಿಂದ ಎಲ್ಲವನ್ನೂ ತಿಳಿಸಿದ್ದಾರೆ. ಆಗ ಬಸ್ ಚಾಲಕ ಹಾಗೂ ನಿರ್ವಾಹಕ ನೇರವಾಗಿ ಬೆಂಗಳೂರಿನ ಉಪ್ಪರಪೇಟೆ ಪೊಲೀಸ್ ಠಾಣೆಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ ಪೋಷಕರಿಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್