ಬ್ರೇಸ್ಲೆಟ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪುರುಷರಿಂದ ಹಿಡಿದು ಮಹಿಳೆಯರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಹಚ್ಚೆ ಕಲಾವಿದರು ಹೊಸ ಜನರೇಶನ್‍ಗಾಗಿ ವಿನೂತನವಾದ ಟ್ಯಾಟೂ ವಿನ್ಯಾಸಗಳನ್ನು ಹಾಕಲು ಪ್ರಾರಂಭಿಸಿದರು. ಯಾವುದೇ ಬಂಗಾರದ ಹಾಗೂ ಬೆಳ್ಳಿಯ ಬ್ರೇಸ್ಲೆಟ್‍ಗಳಿಗೆ ಕಡಿಮೆಯಿಲ್ಲ ಎಂಬಂತೆ ಹೊಸ ಹೊಸ ಶೈಲಿಯ ವಿನ್ಯಾಸಗಳನ್ನು ಹಚ್ಚೆ ಕಲಾವಿದರೂ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.
Advertisement
ಹಚ್ಚೆ ಹಾಕಿಸಿಕೊಳ್ಳುವ ಪ್ರವೃತ್ತಿಯು ಈಗಿನದೇನ್ನಲ್ಲ. ನಮ್ಮ ತಾತ ಮುತ್ತಾತನ ಕಾಲದಿಂದಲೂ ಹಾಕಿಸಿಕೊಳ್ಳುತ್ತಿದ್ದರು. ಅದು ಬರಬರುತ್ತಾ ಜನರಲ್ಲಿ ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಾ ಬರುತ್ತಿದೆ ಅಷ್ಟೇ. ಪಾಶ್ಚಿಮಾತ್ಯರಿಗಂತೂ ಟ್ಯಾಟೂ ಅಂದರೆ ಎಲ್ಲಿಲ್ಲದ ಪ್ರೀತಿ. ಚಲನಚಿತ್ರರಂಗದ ತಾರೆಯರಿಂದ ಹಿಡಿದು ಅನೇಕ ಸ್ಪೋಟ್ಸ್‌ಮ್ಯಾನಗಳು ತಮ್ಮ ಚರ್ಮದ ಮೇಲೆ ವಿಭಿನ್ನ ತರಹದ ವಿನ್ಯಾಸಗಳನ್ನು ಒಳಗೊಂಡ ಟ್ಯಾಟೂಗಳನ್ನು ಹಾಕಿಸಿಕೊಂಡಿರುತ್ತಾರೆ. ಇದರಿಂದಾಗಿ ಸಾಮಾನ್ಯ ಜನರ ಮೇಲೆಯೂ ಕೂಡಾ ಟ್ಯಾಟೂ ಪ್ರಭಾವ ಹೆಚ್ಚಾಗುತ್ತಿದೆ.
Advertisement
Advertisement
ನಿಮ್ಮ ಚರ್ಮಕ್ಕೆ ಒಪ್ಪುವಂತಹ ಕೆಲ ಬ್ರೇಸ್ಲೆಟ್ ಟ್ಯಾಟೂ ವಿನ್ಯಾಸಗಳು:
Advertisement
ಕ್ರಾಸ್ ಬ್ರೇಸ್ಲೆಟ್ ಟ್ಯಾಟೂ: ಮೇಲಿನ ಕ್ರಾಸ್ ಬ್ರೇಸ್ಲೆಟ್ ಟ್ಯಾಟೂವನ್ನು ಕೈ ಮಣಿಕಟ್ಟಿನ ಮೇಲೆ ಹಾಕಲಾಗುತ್ತದೆ. ಅದರಲ್ಲಿ ನೀವು ಯೇಸು ಕ್ರಿಸ್ತನ ಶಿಲುಬೆಯ ಲಾಕೆಟ್‍ನ್ನು 3ಡಿ ವಿನ್ಯಾಸದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ಲಾಕೆಟ್‍ಗೆ ನೀಲಿ ಬಣ್ಣವನ್ನು ಹೋಲುವ ಮುತ್ತುಗಳನ್ನು ನೆಕ್ಲೆಸ್ ಶೈಲಿಯಲ್ಲಿ ಜೋಡಿಸಲಾಗಿದೆ. ಅದು ನೋಡುಗರಿಗೆ ನಿಜವಾದ ಮುತ್ತುಗಳಿರಬಹುದು ಅನ್ನುವ ಹಾಗೆಯೇ ಕಾಣುತ್ತದೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಶಿಲುಬೆಯು ಕ್ರೈಸ್ತ ಧರ್ಮದ ಪವಿತ್ರತೆಯನ್ನು ಪ್ರತಿನಿಧಿಸುತ್ತದೆ. ಪವಿತ್ರ ಶಿಲುಬೆಯು ವ್ಯಕ್ತಿಯ ನಂಬಿಕೆ ಮತ್ತು ಆಯಾ ದೇವರ ಮೇಲಿನ ಪ್ರೀತಿಯನ್ನು ಪ್ರತಿನಿಧಿಸುತ್ತದೆ.
ಮಣಿಕಟ್ಟು ಅಥವಾ ಕುತ್ತಿಗೆಯ ಮೇಲೆ ನೆಕ್ಲೆಸ್ ರೀತಿಯಲ್ಲಿ ಇದನ್ನೂ ನೀವು ಹಾಕಿಸಿಕೊಳ್ಳಬಹುದು. ಈ ಟ್ಯಾಟೂವನ್ನು ನೀವು ನಿರ್ದಿಷ್ಟ ಬಣ್ಣದಲ್ಲಿಯೇ ಹಾಕಿಸಿಕೊಳ್ಳ ಬೇಕಂತೆನಿಲ್ಲ ಹಲವಾರು ವಿಭಿನ್ನ ಬಣ್ಣಗಳನ್ನು ಬಳಸಬಹುದು. ಈ ಹಚ್ಚೆಯ ಗಾತ್ರವು ಚಿಕ್ಕದರಿಂದ ಮಧ್ಯಮ ಗಾತ್ರದ ನಡುವೆ ಇರಬೇಕು. ಫೇರ್ ಮತ್ತು ಮಿಡಿಯಮ್ ಸ್ಕಿನ್ ಟೋನ್‍ಗಳಿಗೆ ಈ ಟ್ಯಾಟೂ ಒಪ್ಪುತ್ತದೆ.
ಚಾರ್ಮ್ ಬ್ರೇಸ್ಲೆಟ್ ಟ್ಯಾಟೂ: ಟ್ಯಾಟೂಗಳನ್ನು ಹಲವು ಮಾದರಿಗಳಲ್ಲಿ ಮಾಡಬಹುದು. ಹಚ್ಚೆ ಕೂಡ ವ್ಯಕ್ತಿಯ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಹಚ್ಚೆ ಆಯ್ಕೆಯಿಂದ ವ್ಯಕ್ತಿಯ ಸ್ವಭಾವವನ್ನು ಹೇಳಬಹುದು. ಚಾರ್ಮ್ ಎಂದರೆ ತುಂಬಾ ಫ್ಯಾಶನ್ ಆಗಿರುತ್ತದೆ. ಚಾರ್ಮ್ ಟ್ಯಾಟೂವು ಅಕ್ಷರಗಳು, ಚಿಟ್ಟೆಗಳು, ಚಿಹ್ನೆಗಳು ಮತ್ತು ಸ್ಟಾರ್ ಬ್ರೇಸ್ಲೆಟ್ ಟ್ಯಾಟೂಗಳಂತಹ ಯಾವುದೇ ವಿಷಯಗಳನ್ನು ಒಳಗೊಂಡಿರಬಹುದು. ಅಂತಹ ಎಲ್ಲಾ ರೀತಿಯ ಹಚ್ಚೆ ಚಾರ್ಮ್ ಶೈಲಿಯ ವಿನ್ಯಾಸಗಳಲ್ಲಿ ಮಾತ್ರ ಹಾಕಲು ಬರುತ್ತದೆ.
ಸ್ಕಿನ್ ಟೋನ್: ಚಾರ್ಮ್‍ಗಳು ಫೇರ್‌ನಿಂದ ಮಧ್ಯಮ ಸ್ಕಿನ್ ಟೋನ್‍ಗಳಲ್ಲಿ ಉತ್ತಮವಾಗಿ ಕಾಣುತ್ತವೆ. ಹೆಚ್ಚಾಗಿ ಮಹಿಳೆಯರು ಅಂತಹ ವಿನ್ಯಾಸಗಳನ್ನು ಇಷ್ಟಪಡುತ್ತಾರೆ.
ಚೈನ್ ಬ್ರೇಸ್ಲೆಟ್ ಟ್ಯಾಟೂ: ಬ್ರೇಸ್ಲೆಟ್ ಟ್ಯಾಟೂ ಚೈನ್ ಮಾದರಿಯಲ್ಲಿ ಮಾತ್ರ ಇರುವ ಟ್ಯಾಟೂ ಹೊರತು ಬೇರೇನೂ ಅಲ್ಲ. ಇದರರ್ಥ ಸರಪಳಿಗಳ ಯಾವುದೇ ಬಹು ವಿನ್ಯಾಸಗಳನ್ನು ದೇಹದ ಮಣಿಕಟ್ಟು ಅಥವಾ ಪಾದದ ಮೇಲೆ ಹಾಕಲಾಗುತ್ತದೆ. ಇದು ಸರಳವಾಗಿರುತ್ತದೆ ಆದರೆ ಗೌರವಯುತವಾಗಿ ಕಾಣುತ್ತದೆ. ಸರಪಳಿ, ಕೀಗಳು, ಶಿಲುಬೆಗಳು, ಅಕ್ಷರಗಳು ಹೀಗೆ ಅನೇಕ ರೀತಿಯ ವಿನ್ಯಾಸಗಳನ್ನು ಇದು ಒಳಗೊಂಡಿರುತ್ತದೆ. ಇದು ಸೂಕ್ತವಾದ ಕೈ ಕಂಕಣ ಹಚ್ಚೆಯಾಗಿದೆ.
ಮಣಿಕಟ್ಟು ಮತ್ತು ಪಾದಕ್ಕೆ ಇದು ಹೆಚ್ಚಾಗಿ ಸೂಟ್ ಆಗುತ್ತದೆ. ಇತರ ಬಣ್ಣಗಳಿಗಿಂತ ಇದನ್ನು ಕಪ್ಪು ಬಣ್ಣದಲ್ಲಿ ಹಾಕಿಸಿಕೊಂಡರೆ ಚೆನ್ನಾಗಿ ಕಾಣುತ್ತದೆ. ಈ ಹಚ್ಚೆಯ ಗಾತ್ರವು ಚಿಕ್ಕದಾಗಿರುತ್ತದೆ. ತಿಳಿ ಚರ್ಮದವರು ಇದನ್ನೂ ಹಾಕಿಸಿಕೊಂಡರೆ ನೋಡಲು ಉತ್ತಮವಾಗಿರುತ್ತದೆ. ಮಹಿಳೆಯರು ಮತ್ತು ಪುರುಷರು ಈ ಶೈಲಿಯ ವಿನ್ಯಾಸಗಳನ್ನು ಸಾಮಾನ್ಯವಾಗಿ ಇಷ್ಟಪಡುತ್ತಾರೆ.
ಆಂಕಲ್ ಬ್ರೇಸ್ಲೆಟ್ ಟ್ಯಾಟೂ: ಮೇಲಿನ ಕಂಕಣವನ್ನು ಪಾದದ ಮೇಲೆ ಮಾಡಲಾಗುತ್ತದೆ. ಟ್ಯಾಟೂವು ಕೋಗಿಲೆಯ ಗರಿಯನ್ನು ಒಳಗೊಂಡಿದ್ದು, ಕೆಲವು ಅಕ್ಷರಗಳನ್ನು ಸಹ ಅದರೊಂದಿಗೆ ಬರೆಯಲಾಗಿದೆ. ಸರಪಳಿ ಶೈಲಿಯ ಈ ಟ್ಯಾಟೂವನ್ನು ಹಾಕಲಾಗುತ್ತದೆ ಈ ರೀತಿಯ ಕಡಗಗಳು ಕಾಲುಗಳ ಮೇಲೆ ಧರಿಸಿಸುವ ಗೆಜ್ಜೆಯ ಹಾಗೇ ಕಾಣುತ್ತದೆ. ಆದ್ದರಿಂದ ಈ ಟ್ಯಾಟೂವನ್ನು ಮಹಿಳೆಯರು, ವಿಶೇಷವಾಗಿ ಕಾಲೇಜು ಹದಿಹರೆಯದವರು ಹೆಚ್ಚು ಇಷ್ಟಪಡುತ್ತಾರೆ. ಹದಿಹರೆಯದ ಹುಡುಗಿಯರಿಗೆ ಇದು ಅತ್ಯುತ್ತಮ ಬ್ರೇಸ್ಲೆಟ್ ಟ್ಯಾಟೂ ವಿನ್ಯಾಸಗಳಲ್ಲಿ ಒಂದಾಗಿದೆ.
ಈ ಟ್ಯಾಟೂ ಪಾದದ ಮತ್ತು ಮಣಿಕಟ್ಟಿನ ಮೇಲೆ ಚೆನ್ನಾಗಿ ಕಾಣುತ್ತದೆ. ಈ ಟ್ಯಾಟೂವನ್ನು ವಿವಿಧ ಬಣ್ಣಗಳಲ್ಲಿ ಅಥವಾ ಕಪ್ಪು ಬಣ್ಣದಲ್ಲಿ ಹಾಕಿಸಿಕೊಳ್ಳಬಹುದು. ಅದರ ಗಾತ್ರವೂ ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿರುತ್ತದೆ. ಕಲರ್ ಫುಲ್ ಟ್ಯಾಟೂ ಎಲ್ಲಾ ಸ್ಕಿನ್ ಟೋನ್ ಗಳಿಗೆ ಚೆನ್ನಾಗಿ ಕಾಣುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದನ್ನು ಹಾಕಿಸಿಕೊಳ್ಳಬಹುದು.