ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿರುವ (Andaman and Nicobar Islands) ಅಂಡಮಾನ್ ಸಮುದ್ರದಲ್ಲಿ (Andaman Sea) ಮಂಗಳವಾರ 4.9 ತೀವ್ರತೆಯ ಭೂಕಂಪ (Earthquake) ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಭೂಕಂಪ ಮುಂಜಾನೆ 3:40 ರ ವೇಳೆಗೆ ಸಂಭವಿಸಿದೆ. ಇದರ ಕೇಂದ್ರ ಬಿಂದುವನ್ನು 77 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಫೆ.6 ರಂದು ಮತ್ತೆ ರಾಜ್ಯಕ್ಕೆ ಮೋದಿ – ಎಲ್ಲಿ ಏನು ಕಾರ್ಯಕ್ರಮ?
Earthquake of Magnitude:4.9, Occurred on 31-01-2023, 00:15:40 IST, Lat: 12.60 & Long: 93.42, Depth: 77 Km ,Location: Andaman Sea, India for more information Download the BhooKamp App https://t.co/61ZTkEGsi4@Indiametdept @ndmaindia @Dr_Mishra1966 @Ravi_MoES @OfficeOfDrJS pic.twitter.com/ct1rCJGw8x
— National Center for Seismology (@NCS_Earthquake) January 30, 2023
ಜನವರಿ 24 ರಂದು ನೆರೆಯ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದು, ಬಳಿಕ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಕಂಪನದ ಅನುಭವವಾಗಿತ್ತು. ಎನ್‌ಸಿಎಸ್ ಪ್ರಕಾರ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k