– ಅರ್ಧ ಕೆಜಿ ಬಂಗಾರ, 2 ಕೆಜಿ ಬೆಳ್ಳಿ, ಕಂತೆ ಕಂತೆ ನೋಟು ಪತ್ತೆ
ಹಾವೇರಿ: ರಾಜ್ಯದ ಹಲವೆಡೆ ಬುಧವಾರ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದು, ಹಾವೇರಿ (Haveri) ನಿರ್ಮಿತಿ ಕೇಂದ್ರ ಎಂಜಿನಿಯರ್ (Engineer) ವಾಗೀಶ್ ಶೆಟ್ಟರ್ ಮನೆಯಲ್ಲಿ ಜಿಂಕೆ ಕೊಂಬು (Deer Horn) ಸಮೇತ ಒಟ್ಟು 4.75 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
Advertisement
ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅದೇ ರೀತಿ ರಾಣೇಬೆನ್ನೂರು (Ranebennur) ನಗರದಲ್ಲಿರುವ ವಾಗೀಶ್ ಶೆಟ್ಟರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅರ್ಧ ಕೆಜಿ ಬಂಗಾರ, 2 ಕೆಜಿ ಬೆಳ್ಳಿ, 18.30 ಲಕ್ಷ ರೂ. ಹಣ, ಹಣ ಎಣಿಕೆ ಮಾಡುವ ಯಂತ್ರ, 3 ಕಾರು, 2 ಟ್ರ್ಯಾಕ್ಟರ್, 2 ಬೈಕ್, 8 ಮನೆ ಪತ್ತೆಯಾಗಿದೆ. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ
Advertisement
Advertisement
ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 16 ಸೈಟ್, 65 ಎಕರೆ ಭೂಮಿ ಹೊಂದಿರುವ ದಾಖಲೆ ಪತ್ತೆಯಾಗಿದೆ. ವಿಶೇಷವೆಂದರೆ 10 ಇಂಚಿನ ಜಿಂಕೆ ಕೊಂಬು ಕೂಡ ಅವರ ಮನೆಯಲ್ಲಿ ಪತ್ತೆಯಾಗಿದ್ದು, ಒಟ್ಟು 4.75 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳು ಏಕಕಾಲದಲ್ಲಿ ಕಚೇರಿ, ಮನೆ ಹಾಗೂ ಕಾಂಪ್ಲೆಕ್ಸ್‌ನಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್
Advertisement