ಬೆಂಗಳೂರು: ಸಾರಿಗೆ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ನಡೆಸಿದ ಮುಷ್ಕರದಿಂದಾಗಿ 4 ಸಾರಿಗೆ ನಿಗಮಗಳಿಗೆ ಬರೋಬ್ಬರಿ 53 ಕೋಟಿ ರೂ. ನಷ್ಟವಾಗಿದೆ.
ಬಿಎಂಟಿಸಿಗೆ 4 ದಿನದಲ್ಲಿ 8.4 ಕೋಟಿ ಹಾಗೂ ಕೆಎಸ್‌ಆರ್‌ಟಿಸಿಗೆ 8 ಕೋಟಿ ಲಾಸ್ ಆಗಿದೆ. ಮೊದಲೇ ನಷ್ಟದಲ್ಲಿರೋ ಸಾರಿಗೆ ನಿಗಮಗಳು ಇದೀಗ ನೌಕರರ ಮುಷ್ಕರದಿಂದಾಗಿ ಮತ್ತಷ್ಟು ಲಾಸ್ ಉಂಟಾಗಿದೆ.
Advertisement
Advertisement
ನಾಲ್ಕು ನಿಗಮದಲ್ಲಿ 1 ಲಕ್ಷದ 30 ಸಾವಿರ ನೌಕರರಿದ್ದಾರೆ. ಪ್ರತಿದಿನ 6 ಸಾವಿರ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚಾರ ಮಾಡುತ್ತವೆ. ಪ್ರತಿದಿನ ಸುಮಾರು 7 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಆದರೆ ನಾಲ್ಕು ದಿನದ ಸಾರಿಗೆ ನೌಕರರ ಮುಷ್ಕರದ ಸಮಯದಲ್ಲಿ ಸಾಕಷ್ಟು ಬಸ್ಸುಗಳು ಸಂಚಾರ ಮಾಡಿದನ್ನು ಹೊರತುಪಡಿಸಿ ಅಂದಾಜು 20 ಕೋಟಿ ನಷ್ಟವಾಗಿದೆ.
Advertisement
4900 ರಿಂದ 5000 ಬಿಎಂಟಿಸಿ ಬಸ್ಸುಗಳು ಪ್ರತಿದನ ಕಾರ್ಯಾಚರಿಸುತ್ತಿದ್ದು, 2 ಕೋಟಿ 10 ಲಕ್ಷ ರೂಪಾಯಿ ಪ್ರತಿದಿನ ಕಲೆಕ್ಷನ್ ಆಗುತ್ತಿತ್ತು. ಇದೀಗ ನಾಲ್ಕು ದಿನದ ಮುಷ್ಕರದಿಂದಾಗಿ ಅಂದಾಜು ನಷ್ಟ 7 ಕೋಟಿ ಲಾಸ್ ಆಗಿದೆ. ಇದನ್ನೂ ಓದಿ: 4 ದಿನದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಗೆ 14 ಕೋಟಿ ನಷ್ಟ!
Advertisement
3,775 ಎನ್‍ಇಕೆಆರ್‌ಟಿಸಿ ಬಸ್ಸುಗಳು ಓಡಾಡುತ್ತವೆ. ಸುಮಾರು 4 ಕೋಟಿ ಪ್ರತಿ ದಿನ ಕಲೆಕ್ಟ್ ಆಗುತ್ತಿತ್ತು. ನಾಲ್ಕು ದಿನದ ಮುಷ್ಕರದಿಂದ ಆದ ಅಂದಾಜು ನಷ್ಟ 12 ಕೋಟಿ ನಷ್ಟವಾಗಿದೆ. ಇನ್ನು 3,402 ಎನ್‍ಡಬ್ಲೂಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, ಪ್ರತಿ ದಿನ 4 ಕೋಟಿ 20 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ನೌಕರರ ಮುಷ್ಕರದಿಂದ ಅಂದಾಜು 14 ಕೋಟಿ 50 ಲಕ್ಷ ರೂಪಾಯಿ ನಷ್ಟವಾಗಿದೆ.
ಶುಕ್ರವಾರ, ಶನಿವಾರ ಹಾಗೂ ಭಾನುವಾರ ನಾಲ್ಕು ನಿಗಮಗಳಿಂದ ನೂರಾರು ಬಸ್ಸುಗಳು ಮಾತ್ರ ಸಂಚಾರ ಮಾಡಿದವು. ನಿನ್ನೆ ಸಂಜೆಯ ನಂತರ ನಾಲ್ಕು ನಿಗಮದಿಂದ ಸುಮಾರು ಶೇ.40 ರಷ್ಟು ಬಸ್ಸುಗಳು ಸಂಚಾರ ಆರಂಭ ಮಾಡಿದೆ.