ಕಾನ್ಪುರದಲ್ಲಿ ನಾಳೆ ನಿರ್ಣಾಯಕ ಏಕದಿನ – ಗೆದ್ದವರಿಗೆ ಸರಣಿ

Public TV
1 Min Read
ind nz 2

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟೀಂ ಇಂಡಿಯಾದ ಕೊನೆಯ ಹಾಗೂ ನಿರ್ಣಾಯಕ 3ನೇ ಏಕದಿನ ಪಂದ್ಯಕ್ಕೆ ಕಾನ್ಪುರ ಗ್ರೀನ್ ಪಾರ್ಕ್ ಕ್ರೀಡಾಂಗಣ ಸಜ್ಜಾಗಿದೆ.

ಮುಂಬೈನಲ್ಲಿ ನಡೆದ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದರೆ, ಪುಣೆಯಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ ಗೆದ್ದಿತ್ತು. ಹೀಗಾಗಿ ಇಂದು ಇತ್ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.

ಕಾನ್ಪುರದಲ್ಲಿ ಅತಿ ಹೆಚ್ಚು ರನ್ ಬಾರಿಸಿದವರಲ್ಲಿ ಮೂವರು ಈಗಲೂ ಟೀಂ ಇಂಡಿಯಾ ಪರವಾಗಿ ಆಟವಾಡುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿಗೆ ಮಾತ್ರ ಈ ಕ್ರೀಡಾಂಗಣ ಅದೃಷ್ಟದ ಕ್ರೀಡಾಂಗಣವಲ್ಲ ಎಂದೇ ಹೇಳಬಹುದು. ಯಾಕೆಂದರೆ ಕೊಹ್ಲಿ ಇಲ್ಲಿ 2 ಪಂದ್ಯವನ್ನಾಡಿದ್ದು, ಈ ಎರಡೂ ಇನ್ನಿಂಗ್ಸ್ ಗಳಲ್ಲಿ ಕೇವಲ 30 ರನ್ ಮಾತ್ರ ಗಳಿಸಿದ್ದಾರೆ. ಆದರೆ ಈ ಸರಣಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್‍ನಲ್ಲಿದ್ದು 2 ಪಂದ್ಯಗಳಲ್ಲಿ ಒಂದು ಶತಕ ಸಹಿತ 150 ರನ್ ಗಳಿಸಿದ್ದಾರೆ. ಇಲ್ಲಿಯೂ ಈ ಫಾರ್ಮ್ ಮುಂದುವರೆಸಿ ಉತ್ತಮ ಆಟದ ಪ್ರದರ್ಶನ ನೀಡಿದರೆ ಟೀಂ ಇಂಡಿಯಾದ ಗೆಲುವು ಅಷ್ಟೇನೂ ಕಷ್ಟವಲ್ಲ. ಶಿಖರ್ ಧವನ್, ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯಾ ಉತ್ತಮ ಫಾರ್ಮ್ ನಲ್ಲಿದ್ದಾರೆ. ರೋಹಿತ್ ಶರ್ಮಾ,

ಪುಣೆಯಲ್ಲಿ ನಡೆದ ಪಂದ್ಯಕ್ಕೂ ಮುನ್ನ ಖಾಸಗಿ ಚಾನೆಲ್ ರಹಸ್ಯ ಕಾರ್ಯಾಚರಣೆ ನಡೆಸಿದ್ದ ಹಿನ್ನೆಲೆಯಲ್ಲಿ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಅಮಾನತು ಮಾಡಲಾಗಿತ್ತು. ಇದರಿಂದಾಗಿ ಕಾನ್ಪುರ ಪಿಚ್ ಗೆ ಭಾರೀ ಭದ್ರತೆ ಒದಗಿಸಲಾಗಿದೆ. ಅಧಿಕೃತ ಪಾಸ್ ಇದ್ದವರನ್ನು ಮಾತ್ರ ಪಿಚ್ ನತ್ತ ಹೋಗಲು ಬಿಡುತ್ತಿದ್ದಾರೆ.

ಕಾನ್ಪುರ ಸ್ಪಿನ್ನರ್ ಕುಲದೀಪ್ ಯಾದವ್ ತವರು ನೆಲವಾಗಿರುವುದರಿಂದ ಅವರು ಈ ಪಂದ್ಯದಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

ind vs nz 2 1

ind vs nz 3 1

ind vs nz 4 1

IND VS NZ 2 ODI 13

IND VS NZ 2 ODI 14

IND VS NZ 2 ODI 15

IND VS NZ 2 ODI 16

IND VS NZ 2 ODI 17

IND VS NZ 2 ODI 18

dinesh karthik 1

ind vs nz 6 1

ind vs nz 1 1

ind vs nz 2 ODI 8

27478

27471

27465

27444

27438

27434

27433

27419

27440

27430

ind vs nz f

Share This Article
Leave a Comment

Leave a Reply

Your email address will not be published. Required fields are marked *