ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣದಲ್ಲಿ ಪ್ರತಿನಿತ್ಯ ಏರಿಳಿತ ಕಂಡು ಬರುತ್ತಿದೆ. ಇಂದು 371 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕೊರೊನಾ ಸಾವಿನ ಸಂಖ್ಯೆಯಲ್ಲಿಯೂ ಇಂದು ಏರಿಕೆ ಕಂಡಿದ್ದು, ಇಂದು 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಇಂದು 193 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. 130 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 4 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
Advertisement
Advertisement
ರಾಜ್ಯದಲ್ಲಿ 342 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 8,914 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,85,598 ಮಂದಿಗೆ ಕೊರೊನಾ ಬಂದಿದೆ. 29,38,653 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.88 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.30 ರಷ್ಟಿದೆ.
Advertisement
ಇಂದು ರಾಜ್ಯದಲ್ಲಿ ಇಂದು ಒಟ್ಟು 2,09,216 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 120073 ಸ್ಯಾಂಪಲ್ (ಆರ್ಟಿ ಪಿಸಿಆರ್ 23024 + 27049 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹಾನಗಲ್ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್ಡಿಕೆ ಆರೋಪ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಕೂಡ ಒಟ್ಟು 6 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 0, ಬಳ್ಳಾರಿ 6, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 193, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 34, ದಾವಣಗೆರೆ 1, ಧಾರವಾಡ 1, ಗದಗ 0, ಹಾಸನ 23, ಹಾವೇರಿ 1, ಕಲಬುರಗಿ 4, ಕೊಡಗು 2, ಕೋಲಾರ 4, ಕೊಪ್ಪಳ 0, ಮಂಡ್ಯ 4, ಮೈಸೂರು 25, ರಾಯಚೂರು 0, ರಾಮನಗರ 1, ಶಿವಮೊಗ್ಗ 2, ತುಮಕೂರು 23, ಉಡುಪಿ 12, ಉತ್ತರ ಕನ್ನಡ 10, ವಿಜಯಪುರ 0 ಮತ್ತು ಯಾದಗಿರಿಯಲ್ಲಿ 1 ಪ್ರಕರಣ ದಾಖಲಾಗಿದೆ.
ಇಂದಿನ 23/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/TYY0veeZKc @cmofKarnataka @mla_sudhakar @Comm_dhfwka @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/cI8dotH7Um
— K'taka Health Dept (@DHFWKA) October 23, 2021