ಜೈಪುರ: ಮನುಷ್ಯರು ಹೊಟ್ಟೆಗೆ ಹಣ್ಣು, ತರಕಾರಿ, ಅನ್ನ ಮತ್ತು ಹೆಚ್ಚು ಆಧುನಿಕತೆಗೆ ಹೊಂದಿಕೊಡವರು ಪಿಜ್ಜಾ ಇನ್ನು ಮುಂತಾದ ಬಾಯಿಗೆ ರುಚಿ ಇರುವ ಪದಾರ್ಥಗಳನ್ನು ತಿನ್ನುತ್ತಾರೆ. ಆದರೆ ರಾಜಸ್ಥಾನದ ಜೋಧ್‍ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬ 1 ರೂಪಾಯಿಯ 63 ನಾಣ್ಯಗಳನ್ನು ನುಗ್ಗಿರುವ ವಿಲಕ್ಷಣ ಘಟನೆ ನಡೆದಿದೆ.
Advertisement
ಜುಲೈ 27 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವ್ಯಕ್ತಿಯೊಬ್ಬನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತನ ಸ್ಥಿತಿ ಕಂಡು ವೈದ್ಯರು ಸ್ಕ್ಯಾನ್ ಮಾಡಿಸುವಂತೆ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ ಲೋಹದ ಗಡ್ಡೆಯನ್ನು ಕಂಡುಹಿಡಿದಿದ್ದಾರೆ. ಆದರೆ, ವೈದ್ಯರು ಎಕ್ಸ್‌ರೇ ನೋಡಿದಾಗ ಸತ್ಯ ಬಯಲಿಗೆ ಬಂದಿದೆ. ಇದನ್ನೂ ಓದಿ: ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
Advertisement
ಈ ಹಿನ್ನೆಲೆ ಎಂಡಿಎಂ ಆಸ್ಪತ್ರೆಯ ವೈದ್ಯರ ತಂಡವು ‘ಎಂಡೋಸ್ಕೋಪಿಕ್ ಕಾರ್ಯವಿಧಾನ’ದ ಸಹಾಯದಿಂದ ಎರಡು ದಿನಗಳ ಸುದೀರ್ಘ ಚಿಕಿತ್ಸೆಯಲ್ಲಿ ವ್ಯಕ್ತಿಯ ಹೊಟ್ಟೆಯಿಂದ ನಾಣ್ಯಗಳನ್ನು ಹೊರತೆಗೆದಿದೆ.
Advertisement
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯ ನರೇಂದ್ರ ಭಾರ್ಗವ್ ಅವರು, ಹೊಟ್ಟೆ ನೋವಿನಿಂದ ವ್ಯಕ್ತಿಯೊಬ್ಬ ನಮ್ಮ ಆಸ್ಪತ್ರೆಗೆ ಬಂದಿದ್ದ. ಅದಕ್ಕೆ ಅವನ ಎಕ್ಸ್-ರೇ ಮಾಡಿಸಿದಾಗ ಅವನು ನಾಣ್ಯಗಳನ್ನು ನುಗ್ಗಿರುವುದು ಪತ್ತೆಯಾಗಿದೆ. ಈ ಕುರಿತು ವಿಚಾರಿಸಿದಾಗ ಆತ 10-15 ನಾಣ್ಯಗಳನ್ನು ನುಗ್ಗಿರುವುದನ್ನು ತಿಳಿಸಿದ್ದಾನೆ. ನಾವು ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಆತ ಸುಧಾರಿಸಿಕೊಂಡಿದ್ದಾನೆ ಎಂದು ವಿವರಿಸಿದರು. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು
ಆತನ ಖಿನ್ನತೆಯಿಂದ ನಾಣ್ಯಗಳನ್ನು ನುಗ್ಗುವ ಅಭ್ಯಾಸ ಮಾಡಿಕೊಂಡಿದ್ದ ಎಂದು ತಿಳಿಸಿದರು.