ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ 6ನೇ ಬಾರಿಗೆ ಚಿನ್ನದ ಜಯಿಸಿ ಅತಿಹೆಚ್ಚು ವಿಶ್ಚ ಚಾಂಪಿಯನ್‍ಶಿಪ್ ಜಯಿಸಿದ ದಾಖಲೆ ಹೊಂದಿರುವ ಕ್ಯೂಬಾ ದಂತಕಥೆ ಫೆಲಿಕ್ಸ್ ಸ್ಯಾವನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಶ್ವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್‍ನ 45 ಕೆಜಿ ವಿಭಾಗದಲ್ಲಿ ಗುರುವಾರ ಫೈನಲ್ ಪ್ರವೇಶ ಮಾಡಿದ್ದ ಮೇರಿಕೋಮ್ ಇಂದು ಉಕ್ರೇನ್ ದೇಶದ ಎಚ್ ಓಖೋಟಾ ವಿರುದ್ಧ 5-0 ಅಂಕಗಳಿಂದ ಗೆಲುವು ದಾಖಲಿಸಿದರು.
Advertisement
Advertisement
ವಿಶ್ವ ಬಾಕ್ಸಿಂಗ್ ಚಾಂಪಿಯನ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ 6 ಚಿನ್ನ, 1 ಬೆಳ್ಳಿ ಪದಕ ಪಡೆದಿದ್ದಾರೆ. 2006 ರಲ್ಲಿ ಸ್ವದೇಶದಲ್ಲೇ ಚಿನ್ನದ ಪದಕ ಗೆದ್ದಿದ್ದ ಮೇರಿ ಕೋಮ್ 2ನೇ ಬಾರಿಗೆ ತವರಿನ ಅಭಿಮಾನಿಗಳ ಮುಂದೇ ಈ ಸಾಧನೆ ಮಾಡಿದ್ದಾರೆ. 2010 ರಲ್ಲಿ 48 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದ ಮೇರಿ ಕೋಮ್ ಚಿನ್ನದ ಪದಕ ಪಡೆದಿದ್ದರು.
Advertisement
ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಮೇರಿ ಕೋಮ್, ತನ್ನ ಈ ಸಾಧನೆಯನ್ನು ಹಾಗೂ ಪದಕವನ್ನು ದೇಶಕ್ಕೆ ಅರ್ಪಿಸುವುದಾಗಿ ತಿಳಿಸಿದರು. ಟೂರ್ನಿಯ ಸೆಮಿ ಫೈನಲ್‍ನಲ್ಲಿ ಗುರುವಾರ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನ ಎದುರಿಸಿದ್ದ ಗೆಲುವು ಪಡೆದಿದ್ದ ಮೇರಿ ಕೋಮ್ ಫೈನಲ್ ಪ್ರವೇಶಿಸಿದ್ದರು.
Advertisement
And ????????’s golden lady has done it; @MangteC is the current reigning light fly champion after she defeats Ukraine’s H.Okhota in an unanimous 5:0 decision at the #WWCHs2018 grand finale! Congratulations Mary! #PunchMeinHainDum #AIBA pic.twitter.com/EcILbkgCLO
— Boxing Federation (@BFI_official) November 24, 2018