ಮಡಿಕೇರಿ: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಕಸರತ್ತು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಡಿಕೇರಿಯ ರೆಸಾರ್ಟಿನಲ್ಲಿ ಬರೋಬ್ಬರಿ 35 ರೂಂ ಬುಕ್ಕಿಂಗ್ ಮಾಡಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟಿನಲ್ಲಿ ರೂಂ ಬುಕ್ಕಿಂಗ್ ಆಗಿದೆ. ಇಂದು ಸಂಜೆ ವೇಳೆಗೆ ಬರುವುದಾಗಿ ಜೆಡಿಎಸ್ ಮುಖಂಡರು ರೂಂ ಬುಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಂ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
35 ರೂಂ ಗಳಲ್ಲಿ 10 ವಿಲ್ಲಾ, 15 ಡಿಲೆಕ್ಸ್ ಮತ್ತು 10 ಕಾಟೇಜ್ ರೂಂಗಳು ಬುಕ್ಕಿಂಗ್ ಮಾಡಲಾಗಿದೆ. ರೂಂ ಬುಕ್ಕಿಂಗ್ ಬಗ್ಗೆ ಪ್ಯಾಡಿಂಗ್ ಟನ್ ಹೋಟೆಲ್ ಮ್ಯಾನೇಜರ್ ರಶ್ಮಿ ತಿಳಿಸಿದ್ದಾರೆ. ರಾತ್ರಿ 1 ಗಂಟೆಗೆ ರೆಸಾರ್ಟ್ ಎಂಡಿ ಕಡೆಯಿಂದ ರೂಂಗಳು ಬುಕ್ ಆಗಿವೆ ಎಂದು ತಿಳಿದು ಬಂದಿದೆ.
Advertisement
ಈಗಾಗಲೇ ಕೊಡಗಿನ 3 ಪ್ರಮುಖ ರೆಸಾರ್ಟಿಗೆ ಜೆಡಿಎಸ್ ಶಾಸಕರು ಶಿಫ್ಟ್ ಆಗುವ ಸಾಧ್ಯತೆ ಇದ್ದು, ಹೋಟೆಲ್‍ಗಳನ್ನು ಈಗಾಗಲೇ ಬುಕ್ಕಿಂಗ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಸಿಎಂ ನಿರ್ದೇಶನದ ಮೇರೆಗೆ ಅಲ್ಲಿನ ಶಾಸಕರು ಪ್ಯಾಡಿಂಗ್‍ಟನ್ ರೆಸಾರ್ಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಮತ್ತೆ ಪ್ಯಾಡಿಂಗ್ ಟನ್ ರೆಸಾರ್ಟಿನಲ್ಲಿ 35 ರೂಂಗಳು ಬುಕ್ಕಿಂಗ್ ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
Advertisement
ಖಾಲಿ ಇಲ್ಲ: ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್ ಶಿಫ್ಟ್ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಲ್ ಟನ್ ಜನರಲ್ ಮ್ಯಾನೇಜರ್ ಮ್ಯಾಥ್ಯೂ ಸ್ಪಷ್ಟನೆ ನೀಡಿ ನಮ್ಮಲ್ಲಿ ಯಾವುದೇ ರೂಂಗಳು ಖಾಲಿ ಇಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಬಂದರೂ ಸಹ ನಮ್ಮಲ್ಲಿ ಯಾವುದೇ ರೂಂ ಖಾಲಿ ಇಲ್ಲ. ಎಲ್ಲಾ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿರುವ ಜೂನಿಯರ್ ಕ್ರಿಕೆಟ್ ಆಟಗಾರರಿದ್ದಾರೆ. ಉಳಿದ ಶೇ.60 ರಷ್ಟು ಭಾಗ ರೆಸಾರ್ಟ್ ನವೀಕರಣ ಆಗುತ್ತಿದೆ ಅದಕ್ಕಾಗಿ ಯಾವುದೇ ಕೊಠಡಿಗಳು ಇಲ್ಲ ಎಂದು ಹೇಳಿದರು.
ಇಲ್ಲಿಯವರೆಗೂ ರೂಂ ಬುಕ್ಕಿಂಗ್ ವಿಚಾರದಲ್ಲಿ ನಮಗೆ ಕರೆ ಬಂದಿಲ್ಲ. ಬಂದರೂ ಸಹ ರೂಂಗಳು ಸಿಗುವುದಿಲ್ಲ. ಇನ್ನು 10 ದಿನಗಳ ಕಾಲ ನಮ್ಮಲ್ಲಿ ಯಾರೇ ಬಂದರೂ ರೂಂ ಸಿಗುವುದಿಲ್ಲ ಎಂದು ತಿಳಿಸಿದರು. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಈಗಲ್ಟನ್ ರೆಸಾರ್ಟಿನಲ್ಲಿ ತಂಗಿದ್ದರು.