ಬೆಂಗಳೂರು: ಬಿಎಂಟಿಸಿ (BMTC) ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದ್ರೆ ಅಪಘಾತಗಳು ಹೆಚ್ಚು. ಸಾವಿನ ಸಂಖ್ಯೆಯೂ ಸಮಾಂತರ ಆಗಿದೆ.
ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತದಿಂದ 34 ಮಂದಿ ಮೃತಪಟ್ಟಿದ್ದಾರೆ. ಬರೋಬ್ಬರಿ 97 ಅಪಘಾತಗಳು ಸಂಭವಿಸಿದೆ. ಕೆಎಸ್‍ಆರ್‌ಟಿಸಿ (KSRTC) ಅಪಘಾತದಿಂದ ಹತ್ತು ಮಂದಿ ಸಾವನ್ನಪ್ಪಿದ್ರೆ, 28 ಅಪಘಾತಗಳಾಗಿರೋ ವರದಿ ಆಗಿದೆ. ಸಂಚಾರಿ ನಿಯಮ ಉಲ್ಲಂಘಿಸುವುದರಲ್ಲಿಯೂ ಕೆಎಸ್‍ಆರ್ ಟಿಸಿಗಿಂತ ಬಿಎಂಟಿಸಿಯೇ ಹೆಚ್ಚಿದೆ. 13,917 ಬಾರಿ ಬಿಎಂಟಿಸಿ ಸಂಚಾರಿ ನಿಯಮ ಉಲ್ಲಂಘಿಸಿದ್ರೆ, ಕೆಎಸ್‍ಆರ್ ಟಿಸಿ 3,347 ಬಾರಿ ಬ್ರೇಕ್ ಮಾಡಿದೆ.
ಸಂಚಾರಿ ನಿಯಮಗಳನ್ನ ಉಲ್ಲಂಘಿಸ್ತಿರೋ ಬಿಎಂಟಿಸಿ ಮತ್ತು ಕೆಎಸ್‍ಆರ್ ಟಿಸಿಗೆ ಸಂಚಾರಿ ಇಲಾಖೆ ಛಾಟಿ ಬೀಸಿದೆ. ಎರಡೂ ಸಾರಿಗೆ ಇಲಾಖೆಗೆ ದಂಡ ಕಟ್ಟಲು ಪತ್ರ ಬರೆದಿದ್ದ ಬೆನ್ನಲ್ಲೇ ಕೋಟ್ಯಂತರ ದಂಡ ಪಾವತಿಯಾಗಿದೆ. ಒಂದು ಕೋಟಿ ನಾಲ್ಕು ಲಕ್ಷದ ಹತ್ತು ಸಾವಿರ ದಂಡ ಬಿಎಂಟಿಸಿ ಪಾವತಿಸಿದೆ. 14 ಲಕ್ಷ ದಂಡವನ್ನು ಕೆಎಸ್‍ಆರ್ ಟಿಸಿ ಕಟ್ಟಿದೆ. ಇದೀಗ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಅಪಘಾತಗಳನ್ನ ಹೆಚ್ಚು ಮಾಡುವರ ವಿರುದ್ದ ಕ್ರಮಕ್ಕೆ ಸೂಚನೆ ಕೊಡಲಾಗಿದೆ. ಇದನ್ನೂ ಓದಿ: ಒಂದೇ ಪೋಸ್ಟ್‌ಗೆ ಇಬ್ಬರ ನೇಮಕ- ಅಧಿಕಾರಿಗಳ ವರ್ಗಾವಣೆ ವೇಳೆ BMTC ಎಡವಟ್ಟು