ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಪ್ರಜ್ವಲ್ ದೇವರಾಜ್‍ರವರು ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳೆಗೆ ಗಿಫ್ಟ್ ನೀಡಿದ್ದಾರೆ.
34ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಜ್ವಲ್ ದೇವರಾಜ್‍ರವರು ಈ ಬಾರಿ ಕೊರೊನಾ ಇರುವುದರಿಂದ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪ್ರಜ್ವಲ್ ದೇವರಾಜ್‍ರವರು ಅಭಿನಯಿಸಿರುವ ಮಾಫಿಯಾ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಸಿನಿಮಾಕ್ಕೆ ನಿರ್ದೇಶಕ ಗುರುದತ್ ಆ್ಯಕ್ಷನ್ ಕಟ್ ಹೇಳಿದ್ದು, ಪೋಸ್ಟರ್‌ನಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಡ್ರೆಸ್ ತೊಟ್ಟು, ಜೀಪಿನೊಳಗೆ ಕುಳಿತುಕೊಂಡು ಖಡಕ್ ಲುಕ್ ನೀಡಿದ್ದಾರೆ.
ಈ ಮುನ್ನ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯಿಸಿದ್ದ ಅಂಬಿ ನಿಂಗೆ ವಯಸ್ಸಾಯ್ತು ಸಿನಿಮಾವನ್ನು ನಿರ್ದೇಶಿಸಿದ್ದ ಗುರುದತ್‍ರವರು ಇದೇ ಮೊದಲ ಬಾರಿಗೆ ಮಾಫಿಯಾ ಸಿನಿಮಾದ ಮೂಲಕ ಥ್ರಿಲ್ಲರ್ ಕಥಾಹಂದರವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೂ ನಿರ್ಮಾಪಕ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಲಿದ್ದಾರೆ. ಇದನ್ನೂ ಓದಿ:ಕಿಚ್ಚನ ಮುಂದೆ ಕಲರ್ ಕಲರ್ ಕಾಗೆ ಬಂತು ಅಂದ ಶಮಂತ್
View this post on Instagram