Bengaluru CityCoronaDistrictsKarnatakaLatestMain Post

ರಾಜ್ಯದಲ್ಲಿ 321 ಕೊರೊನಾ – ಬೆಂಗಳೂರಿನಲ್ಲಿ 211 ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 321 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 4 ಮರಣ ಪ್ರಕರಣ ದಾಖಲಾಗಿದೆ. ಓಮಿಕ್ರಾನ್ ಪಾಸಿಟಿವ್ ಕೇಸ್ ಸ್ಥಿರತೆ ಕಾಯ್ದುಕೊಂಡಿದ್ದು, ಈವರೆಗೆ ರಾಜ್ಯದಲ್ಲಿ 19 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇಂದು ಯಾವುದೇ ಓಮಿಕ್ರಾನ್ ಕೇಸ್ ಪತ್ತೆಯಾಗಿಲ್ಲ.

ರಾಜ್ಯದಲ್ಲಿ ಒಟ್ಟು 253 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,138 ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 30,03,265 ಮಂದಿಗೆ ಕೊರೊನಾ ಬಂದಿದೆ. 29,57,799 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.24 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.32 ರಷ್ಟಿದೆ. ಬೆಂಗಳೂರಿನಲ್ಲಿ 211 ಪಾಸಿಟಿವ್ ಕೇಸ್ ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಒಟ್ಟು 4,30,230 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 97,897 ಸ್ಯಾಂಪಲ್ (ಆರ್‌ಟಿಪಿಸಿಆರ್ 78,870 + 19,027 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 211, ಬೀದರ್ 1, ಚಾಮರಾಜನಗರ 0, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 20, ದಾವಣಗೆರೆ 0, ಧಾರವಾಡ 4, ಗದಗ 0, ಹಾಸನ 5, ಹಾವೇರಿ 0, ಕಲಬುರಗಿ 0, ಕೊಡಗು 20, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 19, ರಾಯಚೂರು 1, ರಾಮನಗರ 0, ಶಿವಮೊಗ್ಗ 3, ತುಮಕೂರು 6, ಉಡುಪಿ 5, ಉತ್ತರ ಕನ್ನಡ 13, ವಿಜಯಪುರ 1 ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button