ನವದೆಹಲಿ: ತೆಲಂಗಾಣದಲ್ಲಿ 6.4 ಕೋಟಿ ರೂ. ಮೌಲ್ಯದ 2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸುದ್ದಿಗೆ ಪ್ರತಿಕ್ರಿಯಿಸುವ ಕಾಂಗ್ರೆಸ್, ಇದೇನಾ ನಿಮ್ಮ ನೋಟ್ ಬ್ಯಾನ್ ಎಂದು ವ್ಯಂಗ್ಯವಾಗಿ ಟೀಕಿಸಿದೆ.
ಕಾಂಗ್ರೆಸ್ ಟ್ವೀಟ್: ಪಿಎಂ ಮೋದಿಯವರೇ ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೋರಾಟ ಸುಳ್ಳು ಎಂಬುವುದು ಸಾಬೀತಾಗಿದೆ. ನಕಲಿ ಕರೆನ್ಸಿ ತೆಗೆದು ಹಾಕುತ್ತೇವೆ ಎಂದು ನೋಟ್ ಬ್ಯಾನ್ ಮಾಡಲಾಯ್ತು. ಆದರೆ ಇಷ್ಟು ದೊಡ್ಡ ಮೊತ್ತದ ನಕಲಿ ನೋಟು ಪತ್ತೆಯಾಗಿದ್ದು ಹೇಗೆ? ಇದೇನಾ ನಿಮ್ಮ ನೋಟ್ ಬ್ಯಾನ್? ಇಷ್ಟು ದೊಡ್ಡ ಪ್ರಮಾಣದ ನಕಲಿ ನೋಟುಗಳು ಹೇಗೆ ಚಲಾವಣೆಗೆ ಬಂತು ಎಂಬುದಕ್ಕೆ ಉತ್ತರಿಸಿ.
ಶನಿವಾರ ತೆಲಂಗಾಣ ಪೊಲೀಸರು ಅಂತರ ರಾಜ್ಯ ಗ್ಯಾಂಗ್ ನ್ನು ಬಂಧಿಸಿ, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಖಮ್ಮಾಮ್ ಜಿಲ್ಲೆಯ ವೆಮ್ಸೂರ್ ನಲ್ಲಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಈ ತಂಡ ಗ್ರಾಹಕರಿಗೆ ನಕಲಿ ನೋಟುಗಳನ್ನು ಅಸಲಿ ಎಂದು ನಂಬಿಸಿ ವ್ಯವಹರಿಸುತ್ತಿದ್ದರು. 20% ಕಮಿಷನ್ ಮೇಲೆ ನೋಟುಗಳ ವರ್ಗಾವಣೆ ನಡೆಸುತ್ತಿದ್ದರು.
Telangana: Khammam police today arrested five persons for cheating public in guise of exchanging Rs. 2,000 denomination currency notes and offering 20% commission.
320 bundles of Rs. 2000 denomination fake notes (around Rs 6.4 crores) seized. pic.twitter.com/ptulXGi1Qb
— ANI (@ANI) November 2, 2019
2 ಸಾವಿರ ರೂಪಾಯಿಯ 320 ಬಂಡಲ್ ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ತೆಲಂಗಾಣದ ನಿವಾಸಿಗಳೆಂದು ತಿಳಿದು ಬಂದಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವ್ಯವಹರಿಸುತ್ತಿದ್ದರು ಎಂದು ವರದಿಯಾಗಿದೆ.