– ಐದು ದಿನಗಳ ಹಿಂದೆ ಬುಲೆಟ್ ಬೈಕ್ ಬಾಡಿಗೆಗೆ ಪಡೆದಿದ್ದ ಯುವಕ
ನೆಲಮಂಗಲ: ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ (Shivaganga Hill) ಟ್ರೆಕ್ಕಿಂಗ್‌ಗೆ ಹೋಗಿದ್ದ 31 ವರ್ಷದ ಯುವಕ ನಾಪತ್ತೆಯಾಗಿದ್ದು, ಹಲವು ಅನುಮಾನಗಳು ಮೂಡಿವೆ.
ಪ್ರತೀಕ್ ಉಪಧ್ಯಾಯ ನಾಪತ್ತೆಯಾದ ಯುವಕ. ನಿನ್ನೆ ಬೆಳಗ್ಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಬಂದಿದ್ದ. ಬೆಟ್ಟದ ಪಾರ್ಕಿಂಗ್‌ನಲ್ಲಿ ಬುಲೆಟ್ ಬೈಕ್ ಪಾರ್ಕಿಂಗ್ ಮಾಡಿ ಬೆಟ್ಟ ಏರಿದ್ದವ ಈಗ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಕುಡಿದು ಮರ್ಸಿಡಿಸ್ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ ಪುತ್ರ; ಅಪಘಾತಕ್ಕೆ ವೃದ್ಧೆ ಬಲಿ
ಐದು ದಿನಗಳ ಹಿಂದೆ ವೈಟ್‌ಫೀಲ್ಡ್‌ನಲ್ಲಿ ಬುಲೆಟ್ ಬೈಕನ್ನು ಬಾಡಿಗೆಗೆ ಪಡೆದಿದ್ದ. ಯುವಕ ನಾಪತ್ತೆ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ. ನಿನ್ನೆ ಬೆಳಗ್ಗೆ ಬೆಟ್ಟ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೆ ವಾಪಸ್ ಆಗಿದ್ದಾನಾ, ಇಲ್ವ ಎಂಬ ಅನುಮಾನ ವ್ಯಕ್ತವಾಗಿದೆ.
ಯುವಕನ ಫೋನ್ ಬೇರೆ ಕಡೆ ಸ್ವಿಚ್ ಆಫ್ ಆಗಿದೆ. ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್‌ನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾ ಬಿಟ್ಟು ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ರಸ್ತೆ ಅಪಘಾತ – ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ
ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4,800 ಅಡಿ ಎತ್ತರದಲ್ಲಿದೆ. ಅಪಾಯಕಾರಿ ರೀತಿಯಲ್ಲಿ ಶಾಂತಲಾ ಡ್ರಾಪ್ ಇದೆ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.



