ಬಾಲಿವುಡ್‌ನಲ್ಲಿ ‘ಸ್ತ್ರೀ 2’ (Stree 2) ಸಕ್ಸಸ್ ಬಳಿಕ ‘ಸಿಂಗಂ ಅಗೇನ್’ (Singham Again) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ರಿಲೀಸ್ ಆದ 10 ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಸೇರಿದೆ. ಅಜಯ್ ದೇವಗನ್ (Ajay Devgn) ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ:ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ
ಅಜಯ್ ದೇವಗನ್ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ‘ಸಿಂಗಂ ಅಗೇನ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ನ.1ರಂದು ‘ಸಿಂಗಂ ಅಗೇನ್’ ಚಿತ್ರ ರಿಲೀಸ್ ಆಗಿತ್ತು. ಕಳೆದ 10 ದಿನಗಳಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕಾಗಿ ಥಿಯೇಟರ್‌ನತ್ತ ಪ್ರೇಕ್ಷಕರು ಹೆಜ್ಜೆ ಹಾಕಿದ್ದಾರೆ.