ಬಹುನಿರೀಕ್ಷಿತ ‘ಕೂಲಿ’ (Coolie) ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಹೈಪ್ ಕ್ರಿಯೆಟ್ ಮಾಡ್ತಿದೆ. ರಜನಿಕಾಂತ್ (Rajanikanth) ಜೊತೆ ಉಪೇಂದ್ರ ನಟಿಸುವ ಬಗ್ಗೆ ಅಫಿಷಿಯಲ್ ಅನೌನ್ಸ್ಮೆಂಟ್ ಸಿಕ್ಕ ಬೆನ್ನಲ್ಲೇ ಈಗ ಮತ್ತೊಂದು ಕ್ರೆಜಿ ಅಪ್ಡೇಟ್ ಹೊರಬಿದ್ದಿದೆ. 30 ವರ್ಷಗಳ ನಂತರ ತಲೈವಾ ಮತ್ತು ಆಮೀರ್ ಖಾನ್ (Aamir Khan) ಕೂಲಿ ಚಿತ್ರಕ್ಕಾಗಿ ಒಂದಾಗ್ತಿದ್ದಾರೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Advertisement
1995ರಲ್ಲಿ ‘ಆತಂಕ್ ಹಿ ಆತಂಕ್’ ಎಂಬ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಆಮೀರ್ ಜೊತೆಯಾಗಿ ನಟಿಸಿದ್ದರು. ಈಗ ಹೊಸ ಪ್ರಾಜೆಕ್ಟ್ ಕೂಲಿ ಚಿತ್ರಕ್ಕಾಗಿ ತಲೈವಾ ಜೊತೆ ಬಾಲಿವುಡ್ ನಟ ಆಮೀರ್ ಖಾನ್ ಸ್ಪೆಷಲ್ ರೋಲ್ನಲ್ಲಿ ನಟಿಸ್ತಾರೆ ಎನ್ನಲಾಗಿದೆ. ಇದು ಜಸ್ಟ್ ಗಾಳಿ ಸುದ್ದಿನಾ ಅಥವಾ ರಿಯಲ್ ಸುದ್ದಿನಾ ಎಂಬುದರ ಕುರಿತು ಚಿತ್ರತಂಡವೇ ತಿಳಿಸಬೇಕಿದೆ.
Advertisement
Advertisement
ಆದರೆ ಆಮೀರ್ ಖಾನ್ರನ್ನು ಡೈರೆಕ್ಟರ್ ಲೋಕೇಶ್ ಕನಕರಾಜ್ ಟೀಮ್ ಸಂಪರ್ಕಿಸಿದೆ ಎನ್ನಲಾಗಿದೆ. ಪಾತ್ರದ ಬಗ್ಗೆ ಕೇಳಿ ನಟ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಇನ್ನೂ ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಈ ಸುದ್ದಿ ನಿಜವಾಗಲಿ ಮತ್ತೊಮ್ಮೆ ಇಬ್ಬರೂ ಒಟ್ಟಿಗೆ ನೋಡುವ ಭಾಗ್ಯ ನಮಗೆ ಸಿಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಇದನ್ನೂ ಓದಿ:ರಣ್ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲಿದ್ದಾರೆ ನಾಗಚೈತನ್ಯ ಭಾವಿ ಪತ್ನಿ
Advertisement
‘ಕೂಲಿ’ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ರಜನಿಕಾಂತ್ ಜೊತೆ ಶ್ರುತಿ ಹಾಸನ್ (Shruti Haasan), ಉಪೇಂದ್ರ (Upendra) ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.