ಮುಂಬೈ: ಪತ್ನಿ ದಪ್ಪ ಆಗಿದ್ದಕ್ಕೆ 18 ಲಕ್ಷ ರೂ. ಹಾಗೂ ಸ್ವಿಫ್ಟ್ ಕಾರ್ ನೀಡುವಂತೆ ಮುಂಬೈ ಪತಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟಿದ್ದಾನೆ.
ಮುಂಬೈನ 30ವರ್ಷದ ವ್ಯಕ್ತಿ ತನ್ನ ಪತ್ನಿಗೆ (26) ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ತಂದೆಯ ಜೊತೆಗೆ ಸೇರಿ ಆಕೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾನೆ. ಪತಿಯ ವರ್ತನೆಯಿಂದ ಮನನೊಂದ ಮಹಿಳೆ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
Advertisement
ಏನಿದು ಪ್ರಕರಣ?:
ಸಂತ್ರಸ್ತ ಮಹಿಳೆ 2017ರಲ್ಲಿ ಮದುವೆ ಆಗಿದ್ದಳು. ಮದುವೆಯ ಸಮಯದಲ್ಲಿ 18 ಲಕ್ಷ ರೂ. ಮೌಲ್ಯದ ಆಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಈಗ ನೀನು ದಪ್ಪ ಆಗಿದ್ದಿಯಾ. ಹೀಗಾಗಿ ಮತ್ತೆ 18 ಲಕ್ಷ ರೂ, ಹಾಗೂ ಒಂದು ಸ್ವಿಫ್ಟ್ ಕಾರ್ ಕೊಡಿಸುವಂತೆ ನಿಮ್ಮ ತಂದೆಗೆ ಹೇಳು ಅಂತಾ ಪತಿ ಮತ್ತು ಮಾವ ಕಿರುಕುಳ ನೀಡಲು ಆರಂಭಿಸಿದ್ದಾರೆ.
Advertisement
Advertisement
ನಮ್ಮ ಮನೆಯಲ್ಲಿ ಅಷ್ಟು ಪ್ರಮಾಣದ ಹಣ ಹೊಂದಿಸಲು ಸಾಧ್ಯವಿಲ್ಲ. ಹೀಗಾಗಿ ವರದಕ್ಷಿಣೆ ನೀಡಲು ಆಗುವುದಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಇದರಿಂದಾಗಿ ನನ್ನ ಮೇಲೆ ಹಲ್ಲೆ ಮಾಡಿ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
Advertisement
ಆರೋಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳ, ಐಪಿಸಿ ಸೆಕ್ಷನ್ 505 (ಉದ್ದೇಶ ಪೂರ್ವಕ ಅವಮಾನ), 506 (ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಿಕೆಸಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಕಲ್ಪನಾ ಗಡೆಕರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv