ಬೆಂಗಳೂರು: ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. 15 ದಿನದಲ್ಲಿ 30 ಜನರು ಸಸ್ಪೆಂಡ್ ಆಗಿದ್ದಾರೆ. ಅಧಿಕಾರಿಗಳು ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ಮಾಜಿ ಸಚಿವ ಮುನಿರತ್ನ (Munirathna) ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಡಿಸಿಎಂ ಡಿಕೆಶಿ ಅವರ ಜೊತೆ ಚರ್ಚೆಗೆ ಅವಕಾಶ ಕೇಳಿದ್ದೇನೆ. ಅವರು ಅವಕಾಶ ಕೊಟ್ಟಾಗ ನಾನು ಮಾತನಾಡುತ್ತೇನೆ. ಒಂದು ವಿಕೆಟ್ ಮಿಸ್ ಆಗಿದೆ, ಅದನ್ನು ತೆಗೆಯಬೇಕು ಎಂದಿದ್ದಾರೆ. ಅವರು ಕ್ರಿಕೆಟ್ ಪ್ಲೇಯರ್, ಅವರು ಹೊಡೀತಾರೆ. ನಾನೊಂದು ಮಿಸ್ ಆಗಿದ್ದೀನಿ, ಅವರು ಆಡಲಿ ನೋಡೋಣ ಎಂದು ಟಾಂಗ್ ನೀಡಿದರು.
Advertisement
Advertisement
ತಮ್ಮ ಮೇಲಿನ ಎಫ್‌ಐಆರ್ ವಿಚಾರವಾಗಿ ಮಾತನಾಡಿದ ಶಾಸಕ ಮುನಿರತ್ನ, ನಾನು ಗಣಿಗಾರಿಕೆ ವೃತ್ತಿ ಮಾಡೋನು ಅಲ್ಲ. ಗಣಿಗಾರಿಕೆ ವೃತ್ತಿ ನನಗೆ ಗೊತ್ತಿಲ್ಲ. ನಾನು 25 ವರ್ಷಗಳ ಹಿಂದೆ ಖರೀದಿಸಿದ ಜಾಗದಲ್ಲಿ ಪಾಯ ತೆಗೆದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ದುಬಾರಿ ವಿದ್ಯುತ್ ಬಿಲ್ – ಹೆಸ್ಕಾಂ ಕಳ್ಳಾಟ ಬಿಚ್ಚಿಟ್ಟ ಪಬ್ಲಿಕ್ ಟಿವಿ
Advertisement
Advertisement
ನಾನು 25 ವರ್ಷಗಳ ಹಿಂದೆ ಖರೀದಿಸಿದ ಜಾಗದಲ್ಲಿ ಪಾಯ ತೆಗೆದಿರೋದೇ ಗಣಿಗಾರಿಕೆನಾ? ಕಟ್ಟಡ ಕಟ್ಟಲು ಪಾಯ ಅಗೆಯೋದು ತಪ್ಪಾ? ಇಷ್ಟಕ್ಕೇ ದೂರು ಕೊಟ್ಟು ಎಫ್‌ಐಆರ್ ಹಾಕಿಸಿದ್ದಾರೆ. ಇದು ಸರ್ಕಾರಿ ಜಾಗ ಅಲ್ಲ, ನಾನೇ ಖರೀದಿಸಿದ ಜಾಗ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ
Web Stories