ಬಳ್ಳಾರಿ: ಗಂಡ ಹೆಂಡತಿ ಇಬ್ಬರೂ ಬೈಕ್ ರೈಡ್ ಮಾಡುತ್ತಾ ಮೂವತ್ತು ತಿಂಗಳು, ನಲವತ್ತು ದೇಶ ಹಾಗೂ ಒಂದು ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಬಂದಿದ್ದಾರೆ.
Advertisement
ಬೈಕ್ ರೈಡ್ ಕ್ರೇಜ್ ಯಾರಿಗೆ ಇಷ್ಟವಿಲ್ಲ ಹೇಳಿ ಕೊಲಂಬಿಯಾದಲ್ಲಿ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಜಾರ್ಜ್ ಓಸೋರಿಯೋ, ಪತ್ನಿ ಅನಾ ಕಳೆದ ಮೂವತ್ತು ತಿಂಗಳಿನಿಂದ ಬೈಕ್ ಪ್ರಯಾಣ ಆರಂಭಿಸಿ ಈಕ್ವೆಡಾರ್, ಪೆರು, ಬುಲೊವಾಯೋ, ಬ್ರಿಜಿಲ್, ವೆನಿಜುವೆಲಾ, ಉರುಗ್ವೆ, ಅರ್ಜೈಂಟೆನಾ, ಚಿಲಿ, ಸೆಹಗಲ್, ಹಂಗೇರಿಯಾ, ಪರುಗ್ವೇ, ಪನಾಮ, ಜರ್ಮನಿ, ಆಸ್ಟ್ರೀಯಾ, ಸ್ಲೋವೇನಿಯಾ, ಪೋಲೆಂಡ್, ಇಟಲಿ, ಸ್ವಿಜರ್ಲ್ಯಾಂಡ್, ಸುತ್ತಿ ಒಂದು ತಿಂಗಳಿನಿಂದ ಭಾರತವನ್ನು ಸುತ್ತುತ್ತಿದ್ದಾರೆ.
Advertisement
Advertisement
ತಮ್ಮ ಬೈಕ್‍ಗೆ ಟಿ.ವಿ.ಯಿಂದ ದೂರವಿರಿ, ದುಶ್ಚಟಗಳಿಗೆ ದಾಸರಾಗಬೇಡಿ ಎನ್ನುವ ಸಂದೇಶಗಳನ್ನು ಸಾರುತ್ತಾ ತಾವು ಆ ದೇಶ ಸುತ್ತಿದ ನೆನಪಿಗಾಗಿ ರಾಷ್ಟ್ರಧ್ವಜವನ್ನು ಬೈಕಿಗೆ ಅಂಟಿಸಿಕೊಂಡಿದ್ದಾರೆ ತಾವು ಸುತ್ತುವ ದೇಶದ ಚಿತ್ರಗಳನ್ನು ತಮ್ಮದೇ ವೆಬ್ ಸೈಟ್ ನಲ್ಲಿ ಹಾಕಿ ಆ ದೇಶದ ಕಲೆ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ.
Advertisement
ಕೊಪ್ಪಳದ ಜಿಲ್ಲೆಯ ಅಂಜನಾದ್ರಿ, ಪಂಪಾಸರೋವರ ನೋಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಆಗಮಿಸದ್ದಾರೆ ಸ್ಮಾರಕಗಳನ್ನು ನೋಡಿ ಹಂಪಿ ಬಜಾರ್ ನಲ್ಲಿ ವಿಶ್ರಾಂತಿ ಪಡೆಯುವಾಗ ದೇಶಿ ವಿದೇಶಿ ಪ್ರವಾಸಿಗರು ಮಾತನಾಡಿಸಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಕ್ಯಾಮರಾಗಳಲ್ಲಿ ಬೈಕ್ ಫೋಟೋ ಕ್ಲಿಕಿಸುತ್ತಿದ್ದರು. ಭಾರತದಲ್ಲಿ ರಸ್ತೆಯು ಬಹಳ ಚೆನ್ನಾಗಿವೆ ಇಲ್ಲಿ ಅನೇಕ ಐತಿಹಾಸಿಕ ಸ್ಥಳಗಳನ್ನು ವಿಶ್ವ ವಿಖ್ಯಾತ ಸ್ಮಾರಕಗಳನ್ನು ನೋಡಿ ಖುಷಿಯಾಗಿದೆ ಎಂದು ಓಸೋರಿಯಾ ದಂಪತಿ ತಿಳಿಸಿದರು.