30 ನಿಮಿಷ ಲೈಟ್ ಆಫ್ – ಪಂಜಾಬ್ ಗಡಿಯಲ್ಲಿ ಸೇನೆಯಿಂದ ಮಾಕ್ ಡ್ರಿಲ್

Public TV
2 Min Read
Indian Army Mock Drill

ಚಂಡೀಗಢ: ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೆಚ್ಚುತ್ತಿರುವ ಕಾದಾಟದ ನಡುವೆಯು ಇದೀಗ ಭಾರತೀಯ ಸೇನೆ (Indian Army) ಪಂಜಾಬ್‌ನ (Punjab) ಫಿರೋಜ್‌ಪುರ (Ferozepur) ಗಡಿ ಭಾಗದಲ್ಲಿ ಮಾಕ್ ಡ್ರಿಲ್ ನಡೆಸಿದೆ.

ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಜೋರಾಗಿದೆ. ಭಾರತ ಪಾಕಿಸ್ತಾನಕ್ಕೆ ಒಂದಾದ ಮೇಲೊಂದರಂತೆ ಶಾಕ್ ಕೊಡುತ್ತಲೇ ಇದೆ. ಇದೆಲ್ಲದರ ನಡುವೆ ಭಾರತೀಯ ಸೇನೆ ಪಂಜಾಬ್‌ನ ಫಿರೋಜ್‌ಪುರ ಗಡಿ ಭಾಗದಲ್ಲಿ ಭಾನುವಾರ ರಾತ್ರಿ 9 ರಿಂದ 9:30ರ ಸಮಯದಲ್ಲಿ ಮಾಕ್ ಡ್ರಿಲ್ ನಡೆಸಿತು.ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ಫಂಡಿಂಗ್‌ – ಪ್ರಭಾವಿ ಮುಸ್ಲಿಮರ ಬ್ಯಾಂಕ್ ಖಾತೆ ಮೇಲೆ ಕಣ್ಣು!

ಮಾಕ್ ಡ್ರಿಲ್ ನಡೆಸುವ ಉದ್ದೇಶದಿಂದ ಪಂಜಾಬ್ ರಾಜ್ಯ ವಿದ್ಯುತ್ ನಿಗಮ ಲಿಮಿಟೆಡ್ 30 ನಿಮಿಷಗಳ ಕಾಲ ವಿದ್ಯುತ್ ಕಡಿತಗೊಳಿಸಿತ್ತು. ಗಡಿಭಾಗದಲ್ಲಿರುವ ಜನರು ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಲೈಟ್ ಉರಿಸದಂತೆ ಮನವಿ ಮಾಡಲಾಗಿತ್ತು. ಜೊತೆಗೆ ಲೌಡ್ ಸ್ಪೀಕರ್ ಮೂಲಕ ಗ್ರಾಮಗಳಿಗೆ ತೆರಳುವಂತೆ ಘೋಷಣೆ ಮಾಡಲಾಯಿತು. ಮಾಕ್ ಡ್ರಿಲ್ ನಡೆದ 30 ನಿಮಿಷಗಳ ಕಾಲ ನಿರಂತರವಾಗಿ ಹೂಟರ್‌ಗಳು ಸದ್ದು ಮಾಡುತ್ತಿದ್ದವು.

ಹಿರಿಯ ಅಧಿಕಾರಿಗಳ ಆದೇಶದಂತೆ, ದೀಪಗಳನ್ನು ಸಂಪೂರ್ಣವಾಗಿ ಆರಿಸಲಾಗಿತ್ತು. ಯಾವುದೇ ವಾಹನ ಲೈಟ್‌ಗಳನ್ನು ಆನ್ ಮಾಡದಂತೆ ಸೂಚಿಸಲಾಗಿತ್ತು. ಇನ್ನೂ ಭದ್ರತಾ ದೃಷ್ಟಿಯಿಂದ ಪಂಜಾಬ್ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.ಇದನ್ನೂ ಓದಿ: 5-10 ಸಾವಿರ ರೂ.ಗೆ ಪಾಕ್ ಐಎಸ್‌ಐಗೆ ಮಿಲಿಟರಿ ಮಾಹಿತಿ ಲೀಕ್‌ – ಇಬ್ಬರು ಅರೆಸ್ಟ್‌

Share This Article