30 ವರ್ಷದ ಹಿಂದೆ ಮುಳುಗಡೆಯಾಗಿದ್ದ ವಿದೇಶಿ ಹಡಗಿನ ಅವಶೇಷ ಪತ್ತೆ

Public TV
1 Min Read
KWR Ship 2 copy

ಕಾರವಾರ: ಸುಮಾರು ಮೂವತ್ತು ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿದೆ.

KWR Ship 3 copy medium

1981 ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಬಂದಿದ್ದ ಈ ಹಡಗು 14.418 ಟನ್ ಡಾಂಬರ್ ಅನ್ನು ಹೊತ್ತು ತಂದಿತ್ತು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿದ್ದ ಈ ಹಡಗು ಇಲ್ಲಿಯೇ ಸಂಪೂರ್ಣ ಸಮುದ್ರದಾಳಕ್ಕೆ ಸೇರಿ ಹೋಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು. ಇದನ್ನೂ ಓದಿ: ಕಾರವಾರದಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆ್ಯಕ್ಟಿವ್- ಐಎಸ್‍ಡಿಯಿಂದ ಅರಣ್ಯದಲ್ಲಿ ಕೂಮಿಂಗ್ ಕಾರ್ಯಚರಣೆ

KWR Ship 2 copy medium

ಹುದುಗಿ ಹೋಗಿದ್ದ ಹಡಗನ್ನು ಮೇಲೆತ್ತಲು ವಿಫಲ
1981ರಲ್ಲಿ ಕಾರವಾರದ ಸಮುದ್ರದಲ್ಲಿ ಹುದುಗಿ ಹೋಗಿದ್ದ ಸಿಂಗಾಪುರ ಮೂಲದ ಈ ಹಡಗನ್ನು ಮೇಲೆತ್ತಲು ಪ್ರಯತ್ನ ಮಾಡಲಾಗಿತ್ತು. ಆದರೇ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿನ ಕಂಪನಿ ಸಮುದ್ರಾಳದಲ್ಲೇ ಹಡಗಿನ ಅವಶೇಷಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತ್ತು. ಆದರೇ ಅತೀ ಆಳ ಹಾಗೂ ಹೆಚ್ಚು ಮರಳು ತುಂಬಿದ್ದರಿಂದ ಅಲ್ಪ ಭಾಗವನ್ನಷ್ಟೇ ಮೇಲೆತ್ತಲಾಗಿತ್ತು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

KWR Ship 1 copy medium

ಆದರೇ ಇದೀಗ ಕ್ವಿಂಟಾಲ್ ಗಟ್ಟಲೇ ತೂಕವಿರುವ ಕಬ್ಬಿಣದ ಹಡಗಿನ ಅವಶೇಷ ತನ್ನಿಂದ ತಾನೇ ಮೇಲೆದ್ದು ಬಂದಿರುವುದು ಸ್ಥಳೀಯ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ- ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಮೀನುಗಾರರು

Share This Article
Leave a Comment

Leave a Reply

Your email address will not be published. Required fields are marked *