ಚಿಕ್ಕಬಳ್ಳಾಪುರ: ವಜ್ರದ ಹರಳು ಎಂದು ನಂಬಿಸಿ ಕಲ್ಲನ್ನ ಕೋಟ್ಯಾಂತರ ರೂಪಾಯಿ ಬೆಲೆಗೆ ಮಾರಾಟ ಯತ್ನಿಸಿದ ವಂಚಕರನ್ನ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಸಾಮಸೇನಹಳ್ಳಿ ಗ್ರಾಮದ ಮಂಜುನಾಥ್, ಶಿವ, ಬೈಯಣ್ಣ, ಹೊನ್ನಪ್ಪ ಸೇರಿ 5 ಮಂದಿಯನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೊನ್ನಪ್ಪ ಎಂಬಾತ ಜಮೀನು ಖರೀದಿಗೆ ಅಂತ ತನ್ನ ಬಳಿ ಬಂದ ಪ್ರಶಾಂತ್ ಎಂಬಾತನಿಗೆ ಸ್ನೇಹಿತನ ಜಮೀನಲ್ಲಿ ವಜ್ರದ ಹರಳು ಸಿಕ್ಕಿದೆ ಮಾರಾಟ ಮಾಡ್ತೀವಿ ಬನ್ನಿ ನೋಡೋಣ ಅಂತ ಕರೆದುಕೊಂಡು ಹೋಗಿದ್ದಾನೆ.
Advertisement
Advertisement
ಚಿಕ್ಕಬಳ್ಳಾಪುರ ತಾಲೂಕು ದೊಡ್ಡಪೈಯ್ಯಲಗುರ್ಕಿ ಗ್ರಾಮದ ಬಳಿ ಸುಮಾರು ಎಂಟು ಕೆಜಿ ತೂಕದ ಕಲ್ಲನ್ನ ವಜ್ರದ ಹರಳು ಅಂತ ಹೇಳಿ ಸುಮಾರು ಮೂರು ಕೋಟಿಗೆ ಮಾರಲು ಯತ್ನಿಸಿದ್ದಾರೆ. ನಮಗೆ ಈ ವಜ್ರದ ಹರಳು ಭೂಮಿಯಲ್ಲಿ ಸಿಕ್ಕಿದೆ ಫಳ ಫಳ ಹೊಳೆಯುತ್ತೆ ಅಂತ 10 ಕೋಟಿ ರೂಪಾಯಿ ಅಂತ ಹೇಳಿ ಕೊನೆಗೆ 3 ಕೋಟಿ ರೂಪಾಯಿಗೆ ಕೋಡೋದಾಗಿ ಹೇಳಿದ್ದಾರೆ.
Advertisement
Advertisement
ಮಾಹಿತಿ ತಿಳಿದ ಗುಡಿಬಂಡೆ ಪೊಲೀಸ್ ಠಾಣೆಯ ಸಿಪಿಐ ಲಿಂಗರಾಜ್ ಮತ್ತವರ ತಂಡ 5 ಮಂದಿ ಹಾಗೂ ನಕಲಿ ವಜ್ರದ ಹರಳಿನ ಕಲ್ಲು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ವಶದಲ್ಲಿ ಆರೋಪಿಗಳಿದ್ದು, ಪ್ರಕರಣ ದಾಖಲಾಗಿದೆ.