ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಆರ್‌ಜಿಐಎ) ಒಳ ಉಡುಪು ಮತ್ತು ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಆರ್‌ಜಿಐಎ ವಿಮಾನ ನಿಲ್ದಾಣದಲ್ಲಿ ಮೂವರು ಮಹಿಳಾ ಪ್ರಯಾಣಿಕರು 1.48 ಕೆಜಿ ತೂಕದ 72.80 ಲಕ್ಷ ಮೌಲ್ಯದ ಚಿನ್ನವನ್ನು ತಮ್ಮ ಒಳ ಉಡುಪು, ಗುಪ್ತಾಂಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದರು. ನಿಲ್ದಾಣದಲ್ಲಿ ತಪಾಸಣೆ ವೇಳೆ ಮಹಿಳೆಯರು ಸಿಕ್ಕಿಬಿದ್ದಿದ್ದು, ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯರ ಬಳಿ ಇದ್ದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ
On 11.01.22 Hyderabad Customs booked 3 cases for smuggling of gold totalling 1.48 kgs valued at Rs. 72.80 lakhs against three female pax who arrived from Dubai. Gold was concealed inside undergarments in two cases and inside rectum in another. Further investigation is ongoing. pic.twitter.com/bpGabmApk9
— Hyderabad Customs (@hydcus) January 11, 2022
ಅಧಿಕಾರಿಗಳ ಪ್ರಕಾರ, ಮಹಿಳೆಯರು ಬೇರೆ ಬೇರೆ ವಿಮಾನಗಳಲ್ಲಿ ದುಬೈನಿಂದ ಹೈದರಾಬಾದ್‍ಗೆ ಆಗಮಿಸಿದ್ದಾರೆ. ಅವರಲ್ಲಿ ಇಬ್ಬರು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದು, ಅದನ್ನು ಒಳ ಉಡುಪುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದರೆ ಇನ್ನೊಬ್ಬ ಮಹಿಳೆ ಅದನ್ನು ಗುಪ್ತಾಂಗದೂಳಗೆ ಬಚ್ಚಿಟ್ಟುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಚಿನ್ನ ಕಳ್ಳಸಾಗಣೆಗಾಗಿ ಹೈದರಾಬಾದ್ ಕಸ್ಟಮ್ಸ್ ಈ ಮೂವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಮೂಲವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪದೇ ಪದೇ ಈ ರೀತಿಯ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅಧಿಕಾರಿಗಳು ಇನ್ನೂ ಹೆಚ್ಚು ಎಚ್ಚೆತ್ತುಕೊಳ್ಳಬೇಕಾಗಿದೆ. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ