ಬೆಂಗಳೂರು: ರಾಜ್ಯದಲ್ಲಿ ಹತ್ತು ಹಲವು ಕಾರಣಗಳಿಂದ ಕೋವಿಡ್ ಸ್ಫೋಟ ಮುಂದುವರಿದಿದೆ. ಕಳೆದ 13 ದಿನಗಳಿಂದ ನಿರಂತರವಾಗಿ ಸೋಂಕು ಪ್ರಮಾಣ ಏರಿಕೆ ಆಗುತ್ತಿದೆ. ಒಂದಿಷ್ಟು ಟಫ್ ರೂಲ್ಸ್ ಜಾರಿ ಮಾಡಿದ್ದರೂ, ಕೋವಿಡ್ ಸಮುದಾಯಕ್ಕೆ ಹಬ್ಬಿರುವ ಕಾರಣ ಸೋಂಕು ಸ್ಫೋಟ ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಿತ್ಯದ ಕೇಸ್ ಕನಿಷ್ಟ 1.5 ಲಕ್ಷಕ್ಕೆ ಏರಿಕೆಯಾಗುವ ಸಂಭವ ಇದೆ. ಹೀಗಾಗಿ ರಾಜ್ಯದಲ್ಲಿ ಜನವರಿ ಅಂತ್ಯದವರೆಗೂ ರಾಜ್ಯದಲ್ಲಿ ಈಗಿರುವ ನಿಯಮಗಳನ್ನೇ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಖುದ್ದು ಮುಖ್ಯಮಂತ್ರಿಗಳು ಕೊರೋನಾ ಸೋಂಕಿತರಾಗಿದ್ದರೂ, ಸೋಂಕು ತಡೆ ನಿಟ್ಟಿನಲ್ಲಿ ತುರ್ತು ವರ್ಚೂವಲ್ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಜನವರಿ 31ರವರೆಗೂ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, 50:50 ರೂಲ್ಸ್ ಈಗಿರುವಂತೆಯೇ ಮುಂದುವರಿಯಲಿವೆ. ಆದರೆ ಜನವರಿ 14ರಂದು ಪ್ರಧಾನಿ ಮೋದಿ ಜೊತೆ ಮೀಟಿಂಗ್ ನಿಗದಿ ಆಗಿರುವ ಕಾರಣ ಇನ್ನಷ್ಟು ಟಫ್ ರೂಲ್ಸ್ ಜಾರಿ ಸಂಬಂಧ ಬೇರೆ ನಿರ್ಣಯಗಳನ್ನು ಬೊಮ್ಮಾಯಿ ಸಭೆ ತೆಗೆದುಕೊಂಡಿಲ್ಲ. ಪ್ರಧಾನಿ ಸಭೆ ಬಳಿಕ ಇನ್ನಷ್ಟು ಟಫ್ ರೂಲ್ಸ್ ಜಾರಿ ಮಾಡುವ ಸುಳಿವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದಾರೆ. ಸದ್ಯಕ್ಕೆ ಬೂಸ್ಟರ್ ಡೋಸ್ ಹೆಚ್ಚಳ ಮಾಡುವಂತೆ.. ಮಕ್ಕಳ ಚಿಕಿತ್ಸೆಗೆ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ಇಂದು ಒಟ್ಟು 14,473 ಪ್ರಕರಣ – ಪಾಸಿಟಿವಿಟಿ ರೇಟ್ 10.30%ಕ್ಕೆ ಏರಿಕೆ
ಬೆಂಗಳೂರಿನ ಅತೀ ಹೆಚ್ಚು ಜನಸಂದಣಿಯ ಪ್ರಮುಖ ಮಾರುಕಟ್ಟೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವ, ವಿಕೇಂದ್ರೀಕರಣ ಮಾಡುವ ಕಾರ್ಯ ಮಾಡುತ್ತೇವೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಾಳೆ ಬಂದ್ ಆಗುತ್ತೆ ಅನ್ನೋ ಭಯ ಜನ್ರಿಗೆ ಬೇಡ. ಆದರೆ ಪರಿಸ್ಥಿತಿ ಕೈಮೀರಿದ್ರೆ ಲಾಕ್‍ಡೌನ್ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ನಾಳೆ ಲಾಕ್ಡೌನ್ ಆಗೋ ಪರಿಸ್ಥಿತಿ ಬಂದರೆ ಕಾಂಗ್ರೆಸ್‍ನವ್ರೇ ಅದರ ಹೊಣೆ ಹೊರಬೇಕು. ಕೇಸ್ ಹೆಚ್ಚಾದ್ರೂ ಕಾಂಗ್ರೆಸ್ಸೇ ಕಾರಣ ಎಂದು ಗೃಹ ಸಚಿವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಟ್ಟಪ್ಪ