ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

Public TV
1 Min Read
BLUETOOTH EARPHONE

ಲಕ್ನೋ: ಇಯರ್‌ಫೋನ್‍ಗಳನ್ನು ಧರಿಸಿ ರೈಲ್ವೆ ಹಳಿಗಳ ಮೇಲೆ ನಡೆಯುತ್ತಿದ್ದ ಮೂವರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದೆ.

ಭದೋಹಿ ರೈಲ್ವೆಸ್ಟೇಷನ್ ವಾರ್ಡ್‍ನಲ್ಲಿ ಇಬ್ಬರು ರೈಲಿಗೆ ಸಿಲುಕಿದ್ದರೆ, ಮತ್ತೊಬ್ಬ ಅಹಿಮಾನ್‍ಪುರದಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಮೂವರು ವಾಕಿಂಗ್‍ಗೆ ತೆರಳಿದಾಗ ಈ ಘಟನೆ ನಡೆದಿದೆ.

train tracker 1

ಜಲಾಲ್‍ಪುರದ ಕೃಷ್ಣ ಅಲಿಯಾಸ್ ಬಂಗಾಲಿ (20) ಮತ್ತು ಆತನ ಸ್ನೇಹಿತ ಮೋನು (18) ಇಯರ್ ಫೋನ್‌ನಲ್ಲಿ ಹಾಡು ಕೇಳುತ್ತಾ ಹಳಿಯ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬರುತ್ತಿದ್ದ ಹೌರಾ ಲಾಲ್ಕುವಾಲ್ ಎಕ್ಸ್‌ಪ್ರೆಸ್‍ನ ಶಬ್ದ ಆ ಯುವಕರಿಗೆ ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಎಷ್ಟೇ ಹೊತ್ತಾದರೂ ಈ ಇಬ್ಬರೂ ಯುವಕರೂ ಮನೆಗೆ ಬಾರದಿದ್ದರಿಂದ, ಕುಟುಂಬಸ್ಥರು ಅವರನ್ನು ಹಡುಕಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರ ಮೃತದೇಹಗಳು ಪತ್ತೆ ಆಗಿವೆ. ಇದನ್ನೂ ಓದಿ: ಗರ್ಭಿಣಿ ಮೇಲೆ ಸತತ ಮೂರು ದಿನಗಳಿಂದ ಗ್ಯಾಂಗ್ ರೇಪ್

train tracker

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ದಲ್ಪತ್‍ಪುರ ಗ್ರಾಮದ ಪಂಕಜ್ ದುಬೆ (30) ವಾರಣಾಸಿ – ಅಲಹಾಬಾದ್ ರೈಲ್ವೆ ಮಾರ್ಗದ ಅಹಿಮಾನ್‍ಪುರ ರೈಲ್ವೆ ಸ್ಟೇಷನ್‌ನ ಬಳಿ ಇಯರ್‌ಫೋನ್ ಧರಿಸಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರಯಾಗ್‍ ರಾಜ್‍ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಅಳಲು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *