ಬೆಂಗಳೂರು: ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರು ರಾಜೀನಾಮೆ ವಾಪಸ್ ಪಡೆಯುತ್ತೇನೆ, ಸಮಯವಕಾಶ ಬೇಕು ಎಂದು ಹೇಳುವ ಮೂಲಕ ಶನಿವಾರ ಇಡೀ ದಿನ ಡ್ರಾಮಾ ಮಾಡಿದ್ದಾರೆ. ಯಾಕಂದ್ರೆ ಎಂಟಿಬಿ ಅವರು ನಿನ್ನೆಯೇ ಮುಂಬೈಗೆ ತೆರಳಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ಹೌದು. ಎಂಟಿಬಿ ಅವರು ನಿನ್ನೆ ಬೆಳಗ್ಗೆಯೇ ಎಂಟಿಬಿ ಅವರು ಸುಧಾಕರ್ ಜೊತೆ ಮುಂಬೈಗೆ ಹಾರಬೇಕಿತ್ತು. ಅದಕ್ಕಾಗಿ ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನ ಕೂಡ ಸಿದ್ಧವಾಗಿತ್ತು. ಆದರೆ ಮೂರು ಬಾರಿ ಶೆಡ್ಯೂಲ್ ಆಗಿದ್ದ ವಿಶೇಷ ವಿಮಾನ ಕ್ಯಾನ್ಸಲ್ ಆಗಿತ್ತು.
Advertisement
Advertisement
ಯಾಕೆಂದರೆ ಮುಂಜಾನೆಯೇ ಎಂಟಿಬಿ ಮನೆಗೆ ಸಚಿವ ಡಿಕೆ ಶಿವಕುಮಾರ್ ಹೋಗಿದ್ದರು. ಇದೇ ಕಾರಣದಿಂದ ಫ್ಲೈಟ್ ಕ್ಯಾನ್ಸಲ್ ಮಾಡಲಾಗಿತ್ತು. ಎಂಟಿಬಿ ಮನೆಗೆ ಡಿಕೆಶಿ ಹೋಗ್ತಿದ್ದಂತೆಯೇ ಇತ್ತ ರಹಸ್ಯ ಸ್ಥಳಕ್ಕೆ ಸುಧಾಕರ್ ಶಿಫ್ಟ್ ಆಗಿದ್ದರು. ಎಂಟಿಬಿ ಮಧ್ಯಾಹ್ನದ ಹೊತ್ತಿಗೆ ರಿಲೀಸ್ ಆಗಬಹುದು ಎಂದು ಊಹಿಸಿದ್ದರು. ಆದರೆ ಮಧ್ಯಾಹ್ನ ಸಿದ್ದರಾಮಯ್ಯ ಮನೆಗೆ ಎಂಟಿಬಿ ಶಿಫ್ಟ್ ಆಗಿಬಿಟ್ಟರು. ಈ ಮೂಲಕ ಹೆಚ್‍ಎಎಲ್‍ನಲ್ಲಿ ಇದ್ದ ವಿಶೇಷ ವಿಮಾನದ ಮೂರು ಶೆಡ್ಯೂಲ್ ಕೂಡ ಕ್ಯಾನ್ಸಲ್ ಆಯ್ತು.
Advertisement
Advertisement
ಇತ್ತ ಸುಧಾಕರ್ ಹುಡಕಾಟಕ್ಕೆ ದೊಸ್ತಿ ನಾಯಕರು ಕೈ ಹಾಕಿದ್ದರು. ಅತ್ತ ಸುಧಾಕರ್ ಗುಪ್ತವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟೇ ಬಿಟ್ಟಿದ್ದರು. ಅಲ್ಲಿಗೆ ಎಂಟಿಬಿಗೆ ಸಂಧಾನಕ್ಕೆ ಒಪ್ಪಿರುವ ಡ್ರಾಮಾ ಮಾಡುವಂತೆ ಸೂಚಿಸಲಾಗಿತ್ತು. ಸಿದ್ದರಾಮಯ್ಯ ನಿವಾಸದಲ್ಲಿ ಸಂಧಾನಕ್ಕೆ ಒಪ್ಪಿದ್ದೇನೆ ಎಂದು ಎಂಟಿಬಿ ಡ್ರಾಮಾ ಮಾಡಿದ್ದರು. ಅಲ್ಲಿಂದ ನಿವಾಸಕ್ಕೆ ಬಂದ ಎಂಟಿಬಿ ಅವರನ್ನು ಆಪರೇಷನ್ ಟೀಂ ರಹಸ್ಯವಾಗಿ ಭೇಟಿಯಾಯಿತು. ಪ್ಲ್ಯಾನ್‍ನಂತೆಯೇ ಇವತ್ತು ವಿಶೇಷ ವಿಮಾನ ಶೆಡ್ಯೂಲ್ ಆಗಿ ಮುಂಬೈಗೆ ಹಾರಿದರು.