ವಾಷಿಂಗ್‌ಟನ್: ಇಲ್ಲಿನ ಮಿಚಿಗನ್ ಶಾಲೆಯಲ್ಲಿ 15 ವರ್ಷದ ವಿದ್ಯಾರ್ಥಿ ನಡೆಸಿದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಈ ವರ್ಷದಲ್ಲಿ ಯುಎಸ್ ಶಾಲೆಯೊಂದರಲ್ಲಿ ನಡೆದ ಭೀಕರ ಹತ್ಯೆ ದಾಳಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ಪ್ರೌಢಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದಾಗ ಮಧ್ಯಾಹ್ನದ ವೇಳೆಗೆ ನಡೆಸಿದ ಗುಂಡಿನ ದಾಳಿಯಲ್ಲಿ ಶಾಲಾ ಶಿಕ್ಷಕ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಓಕ್‌ಲ್ಯಾಂಡ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ದಾಳಿ ನಡೆಸಿದ ವಿದ್ಯಾರ್ಥಿ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ
Advertisement
Advertisement
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಕುಟುಂಬದ ದುಃಖದಲ್ಲಿ ನಾನೂ ಭಾಗಿ ಎಂದು ಹೇಳಿದ್ದಾರೆ.
Advertisement
ಎವೆರಿಟೌನ್ ನೀಡುವ ಅಂಕಿಅಂಶಗಳ ಪ್ರಕಾರ, 2021ರಲ್ಲಿ ಯುಎಸ್‌ನ ವಿವಿಧ ಶಾಲೆಗಳಲ್ಲಿ ಈವರೆಗೂ ಸುಮಾರು 138 ಗುಂಡಿನ ದಾಳಿಗಳು ನಡೆದಿವೆ. ಇಷ್ಟು ದಾಳಿಗಳಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಆದರೆ ಪ್ರತಿ ದಾಳಿಯಲ್ಲಿ 2ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿರಲಿಲ್ಲ. ಇದನ್ನೂ ಓದಿ: ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ
Advertisement
ಯುಎಸ್ ಇತಿಹಾಸದಲ್ಲೇ 2007ರಲ್ಲಿ ವರ್ಜೀನಿಯಾ ಟೆಕ್ ಬ್ಲ್ಯಾಕ್ಸ್‌ಬರ್ಗ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದರು. 2012ರ ನೆಟ್‌ಟೌನ್ ಬಳಿಯ ಶಾಲೆಯಲ್ಲಿ ನಡೆದ ದಾಳಿಯಲ್ಲಿ 20 ವಿದ್ಯಾರ್ಥಿಗಳು ಸೇರಿದಂತೆ 28 ಮಂದಿ ಸಾವನ್ನಪ್ಪಿದ್ದರು. 2018ರಲ್ಲಿ ಫ್ಲೋರಿಡಾ ಬಳಿಯ ಶಾಲೆಯಲ್ಲಿನ ದಾಳಿಗೆ 17 ಮಂದಿ ಸಾವಿಗೀಡಾಗಿದ್ದರು.