ಪೊಲೀಸರು ಅಂತಾ ಹೇಳ್ಕೊಂಡು ಚಿನ್ನದ ಬಿಸ್ಕೆಟ್‌, ಹಣ ದರೋಡೆ ಮಾಡಿದ್ದ ಆರೋಪಿಗಳು ಅಂದರ್‌

Public TV
1 Min Read
robbers

ಬೆಂಗಳೂರು: ಪೊಲೀಸರೆಂದು ಬೆದರಿಸಿ ಚಿನ್ನದ ಬಿಸ್ಕೆಟ್‌ ಹಾಗೂ 6 ಲಕ್ಷ ರೂ. ನಗದು ದರೋಡೆ ಮಾಡಿದ್ದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ದರೋಡೆ ಮಾಡಿದ್ದ ಹೋಮ್ ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರೂ ವ್ಯಕ್ತಿಯೊಬ್ಬನನ್ನು ಟಾರ್ಗೆಟ್‌ ಮಾಡಿ ದರೋಡೆ ಮಾಡಿದ್ದರು. ಪೊಲೀಸರು ಎಂದು ಹೇಳಿಕೊಂಡು ವ್ಯಕ್ತಿಯಿಂದ ಚಿನ್ನ ಹಾಗೂ ನಗದು ದರೋಡೆ ಮಾಡಿದ್ದರು. ಇದನ್ನೂ ಓದಿ: ಫೆ. 21ರಿಂದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಯಾತ್ರೆಯ ಮೂರನೇ ಟ್ರಿಪ್‌

police jeep 1

ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಸುಂದರಮ್‌ ಎಂಬ ವ್ಯಕ್ತಿ ಬಳಿ ಪೊಲೀಸರೆಂದು ಹೇಳಿ ಆರೋಪಿಗಳು ದರೋಡೆ ಮಾಡಿದ್ದರು. ಸುಂದರಮ್‌ ಎಂಬಾತ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡಿಕೊಂಡಿದ್ದಾರೆ. ಶಿವಮೊಗ್ಗದಿಂದ ಚಿನ್ನದ ಬಿಸ್ಕೆಟ್‌ ಹಾಗೂ 6 ಲಕ್ಷ ರೂ. ಹಣ ತಂದಿದ್ದರು. ಅವರ ಬಳಿ ಚಿನ್ನ ಹಾಗೂ ಹಣ ಇರುವ ಬಗ್ಗೆ ಹೋಮ್‌ ಗಾರ್ಡ್‌ ಮಾಹಿತಿ ನೀಡಿದ್ದ. ನಂತರ ಆಟೋ ಚಾಲಕರು ಈ ಕೃತ್ಯ ಎಸಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಕ್ಷ ಸೂಚಿಸಿದ್ರೆ ಹಾಸನದಿಂದಲೂ ಸ್ಪರ್ಧೆಗೆ ಸಿದ್ಧ: ಹೆಚ್‌.ಡಿ.ರೇವಣ್ಣ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *