ಇಸ್ತಾಂಬುಲ್: ಪ್ರಕೃತಿ ವಿಕೋಪಕ್ಕೆ ಟರ್ಕಿ (Turkey), ಸಿರಿಯಾ (Syria) ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಎರಡೂ ದೇಶಗಳಲ್ಲಿ ಕಳೆದ 24 ಗಂಟೆಯಲ್ಲಿ 3 ಬಾರಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಭಾರೀ ಸಾವು ನೋವಿಗೆ ಕಾರಣವಾಗಿದೆ.
Advertisement
ಅನೇಕ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಟರ್ಕಿ ಕಾಲಮಾನ ನಸುಕಿನ ಜಾವ 4.17ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ (Earthquake) ತೀವ್ರತೆ 7.8 ದಾಖಲಾಗಿದೆ. ಆಗ್ನೇಯ ಟರ್ಕಿಯ ಗಾಜಿಯಾನ್ ತೆಪ್ ಪ್ರಾಂತ್ಯದಿಂದ 33 ಕಿಲೋಮೀಟರ್ ದೂರದಲ್ಲಿ, 18 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ. ಇದನ್ನೂ ಓದಿ: ಸಿರಿಯಾ, ಟರ್ಕಿಯಲ್ಲಿ 7.8 ತೀವ್ರತೆಯಲ್ಲಿ ಭೂಕಂಪನ – 90 ಮಂದಿ ಸಾವು
Advertisement
Advertisement
ಭೂಕಂಪದ ತೀವ್ರತೆಗೆ ಸಾವಿರಾರು ಕಟ್ಟಡಗಳು ಆಟಿಕೆಗಳ ರೀತಿಯಲ್ಲಿ ನೆಲಸಮಗೊಂಡಿವೆ. ಕಳೆದ 24 ಗಂಟೆಯಲ್ಲಿ ಸರಿಸುಮಾರು 2,300 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 15 ವರ್ಷ ಏರೋಸ್ಪೇಸ್ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ 5 ಪಟ್ಟು ಕಳೆದ 8 ವರ್ಷಗಳಲ್ಲಿ ತಯಾರಾಗಿದೆ: ಮೋದಿ
Advertisement
ಟರ್ಕಿಯಲ್ಲಿ 1939ರಲ್ಲಿ 7.8 ತೀವ್ರತೆಯ ಭೂಕಂಪ ಕಾಣಿಸಿಕೊಂಡಿತ್ತು. ಆಗ ಪೂರ್ವ ಎರ್ಜಿಂಕನ್ ಪ್ರಾಂತ್ಯದಲ್ಲಿ ಸುಮಾರು 33 ಸಾವಿರ ಮಂದಿ ದಾರುಣ ಸಾವಿಗೀಡಾಗಿದ್ದರು. ಆ ನಂತರ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಟರ್ಕಿ, ಉತ್ತರ ಸಿರಿಯಾ, ಲೆಬನಾನ್, ಇಸ್ರೇಲ್ನಲ್ಲೂ ತೀವ್ರ ಕಂಪನ ಉಂಟಾಗಿದೆ. ಟರ್ಕಿಯ ದಿಯರ್ಬಕರ್, ಸಿರಿಯಾದ ಅಲೆಪ್ಪೀ, ಹುಮಾ ನಗರಗಳಲ್ಲಿ ಸಾವಿರಾರು ಕಟ್ಟಡ ನೆಲಸಮವಾಗಿವೆ. 7.8 ರಷ್ಟು ತೀವ್ರತೆಯ ಭೂಕಂಪದ ಬಳಿಕ ಗಂಟೆಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು, ಹೆಚ್ಚು ಸಾವು ನೋವಿಗೆ ಕಾರಣವಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
45 ದೇಶಗಳಿಂದ ನೆರವು ಘೋಷಣೆ: ಟರ್ಕಿ, ಸಿರಿಯಾದ ಭೂ ಕಂಪನ ಕಂಡು ವಿಶ್ವದ ಹಲವು ರಾಷ್ಟ್ರಗಳು ದಿಗ್ಭ್ರಮೆಗೊಂಡಿವೆ. ಭಾರತದ ಪ್ರಧಾನಿ ಮೋದಿ (Narendra Modi), ಸಂತ್ರಸ್ತ ದೇಶಗಳಿಗೆ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಎರಡು ಎನ್ಡಿಆರ್ಎಫ್ (NDRF) ತಂಡ, ವೈದ್ಯಕೀಯ ತಂಡ, ಪರಿಹಾರ ಸಾಮಗ್ರಿಯನ್ನು ಭಾರತ ಸರ್ಕಾರ (Government Of India) ಟರ್ಕಿಗೆ ಕಳಿಸಿಕೊಟ್ಟಿದೆ. ಈ ಬೆನ್ನಲ್ಲೇ ಅಮೆರಿಕ ಜರ್ಮನಿ ಸೇರಿದಂತೆ ವಿಶ್ವದ 45 ರಾಷ್ಟ್ರಗಳು ನೆರವು ಘೋಷಣೆ ಮಾಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k